ನವದೆಹಲಿ: ಮಧ್ಯಪ್ರದೇಶದಲ್ಲಿ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕಮಲನಾಥ್ ಮತ್ತು ಅವರ ಆಪ್ತರ ಮನೆ ಮೇಲೆ ನಡೆಸಿದ ದಾಳಿಯಲ್ಲಿ, ದಾಖಲೆ ಇಲ್ಲದ ಒಟ್ಟು ₹281 ನಗದು ಪತ್ತೆಯಾಗಿದೆಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.

‘ವ್ಯಾಪಾರ, ರಾಜಕೀಯ ಚಟುವಟಿಕೆ ಮತ್ತು ನಾಗರಿಕ ಸೇವೆ ರೂಪದಲ್ಲಿರಾಜಕಾರಣಿಗಳಿಗೆ ಅಥವಾ ಮತದಾರರಿಗೆ ಹಂಚಲು ₹281 ಕೋಟಿಯನ್ನು ಸಂಗ್ರಹಿಸಲಾಗಿತ್ತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ವಿವಿಧ ಕಡೆಭಾನುವಾರ ಮತ್ತು ಸೋಮವಾರ ಐಟಿ ದಾಳಿ ನಡೆದಿತ್ತು.

‘ಮಧ್ಯಪ್ರದೇಶದಿಂದ ದೆಹಲಿಯ ಪ್ರಮುಖ ರಾಜಕೀಯ ಪಕ್ಷಕ್ಕೆ ಕಳುಹಿಸಲು ಯತ್ನಿಸುತ್ತಿದ್ದ ₹20 ಕೋಟಿ ಅಕ್ರಮ ಹಣವನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಸಿಬಿಡಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ವೇಳೆ, ₹14.6 ಕೋಟಿ ನಗದು, ಹುಲಿ ಚರ್ಮ, 252 ಮದ್ಯದ ಬಾಟಲಿ, ದಾಖಲೆ ಪತ್ರ, ಡೈರಿಗಳು,ಕಂಪ್ಯೂಟರ್ ಫೈಲ್‌ಗಳು, ನಕಲಿ ಬಿಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಖಲೆ ಪತ್ರಗಳಲ್ಲಿ ₹230 ಕೋಟಿ ಅಕ್ರಮ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.