ಮಸೀದಿ ಆವರಣ ಸ್ವಚ್ಛಗೊಳಿಸಲು ಅನುಮತಿ
ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಜಾಮಾ ಮಸೀದಿಯ ಆವರಣವನ್ನು ಸ್ವಚ್ಛಗೊಳಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ. ಆದರೆ ಮಸೀದಿಗೆ ಬಣ್ಣ ಬಳಿಯಲು ನ್ಯಾಯಾಲಯ ಅನುಮತಿ ನೀಡಿಲ್ಲ. ರಂಜಾನ್ ತಿಂಗಳು ಆರಂಭವಾಗಲಿರುವ ಕಾರಣ ಮಸೀದಿಯನ್ನು ಸ್ವಚ್ಛಗೊಳಿಸಲು ಮತ್ತು ಬಣ್ಣ ಬಳಿಯಲು ಅವಕಾಶ ನೀಡುವಂತೆ ಕೋರಿ ಮಸೀದಿಯ ನಿರ್ವಹಣಾ ಸಮಿತಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.