ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಒತ್ತಾಯಿಸಿದ ಜಾರ್ಖಂಡ್ ಸಚಿವ

Last Updated 26 ಜುಲೈ 2019, 14:35 IST
ಅಕ್ಷರ ಗಾತ್ರ

ರಾಂಚಿ: ವಿಧಾನಸೌಧದ ಹೊರಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಜಾರ್ಖಂಡ್ ಸಚಿವ ಸಿ.ಪಿ.ಸಿಂಗ್, ಮುಸ್ಲಿಂ ಶಾಸಕರೊಬ್ಬರಲ್ಲಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರಲ್ಲಿ ಸಿ.ಪಿ.ಸಿಂಗ್ ಅವರು, ಇರ್ಫಾನ್ ಭಾಯ್, ಗಟ್ಟಿಯಾಗಿ ಜೈ ಶ್ರೀರಾಮ್ ಎಂದು ಕೂಗಿ ಎಂದು ಹೇಳುತ್ತಿದ್ದಾರೆ. ಆಮೇಲೆ ನಿಮ್ಮ ಪೂರ್ವಜರು ರಾಮನ ಮೂಲದವರು ಬಾಬುರ್ ಮೂಲದವರು ಅಲ್ಲ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.ಗುರುವಾರ ಮಾತುಕತೆ ನಡೆದಿದ್ದು ವಿಡಿಯೊ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವಿಡಿಯೊದಲ್ಲೇನಿದೆ?
ನೀವು ರಾಮನ ಹೆಸರು ಹೇಳಿ ಭಯಪಡಿಸುತ್ತಿದ್ದೀರಿ.ನೀವು ರಾಮನ ಹೆಸರನ್ನು ಕೆಡಿಸುತ್ತಿದ್ದೀರಿ.ಈ ಹೊತ್ತಿನ ಅವಶ್ಯಕತೆ ಉದ್ಯೋಗ, ವಿದ್ಯುತ್, ನೀರು ಮತ್ತು ಚರಂಡಿ ವ್ಯವಸ್ಥೆ ಎಂದು ಅನ್ಸಾರಿ ಹೇಳುತ್ತಿದ್ದಾರೆ.

ನಿಮ್ಮನ್ನು ಭಯ ಪಡಿಸುವುದಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ.ನಿಮ್ಮ ಪೂರ್ವಜರು ಜೈ ಶ್ರೀರಾಮ್ ಅಂದಿದ್ದರು.ತೈಮೂರ್, ಬಾಬೂರ್, ಘಜನಿ ನಿಮ್ಮ ಪೂರ್ವಜರಲ್ಲ.ನಿಮ್ಮ ಪೂರ್ವಜರು ಶ್ರೀರಾಮನ ಅನುಯಾಯಿಗಳಾಗಿದ್ದರು ಎಂದು ಸಿಂಗ್ ಹೇಳಿದ್ದಾರೆ.

ಜಾರ್ಖಂಡ್‌ನ ಬಿಜೆಪಿ ನೇತೃತ್ವದ ಸಿ.ಪಿ. ಸಿಂಗ್ ಅವರು ನಗರಾಭಿವೃದ್ಧಿ, ವಸತಿ ಮತ್ತು ಸಾರಿಗೆ ಸಚಿವರಾಗಿದ್ದಾರೆ. ಇರ್ಫಾನ್ ಅನ್ಸಾರಿ ಅವರು ಜಮ್ತಾರಾ ಚುನಾವಣಾ ಕ್ಷೇತ್ರದ ಶಾಸಕರಾಗಿದ್ದಾರೆ.

ಆದಾಗ್ಯೂ, ಈ ವಿಡಿಯೊವನ್ನು ತಪ್ಪಾಗಿ ಅರ್ಥೈಸಲಾಗಿದೆ.ಅದೊಂದು ಹಾಸ್ಯದ ಮಾತುಕತೆ ಆಗಿತ್ತು ಎಂದು ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT