ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂದೆ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲು ಅಬ್ಬಾಸ್‌ ಅನ್ಸಾರಿಗೆ ಅನುಮತಿ

Published 15 ಮೇ 2024, 15:35 IST
Last Updated 15 ಮೇ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ಜೈಲು ಶಿಕ್ಷೆಗೆ ಒಳಗಾಗಿರುವ ಉತ್ತರ ಪ್ರದೇಶ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ್‌ ಅನ್ಸಾರಿ ಅವರಿಗೆ ಅವರ ತಂದೆ ಮುಖ್ತರ್‌ ಅನ್ಸಾರಿ ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್‌ ಬುಧವಾರ ಅನುಮತಿ ನೀಡಿದೆ.

ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಖ್ತರ್‌ ಅನ್ಸಾರಿ ಅವರು ಮಾರ್ಚ್‌ 28ರಂದು ಹೃದಯಾಘಾತದಿಂದ ಮೃತಪಟ್ಟರು. ಅವರ ಪುಣ್ಯಸ್ಮರಣೆಯನ್ನು ಜೂನ್ 10ರಂದು ಉತ್ತರ ಪ್ರದೇಶದ ಗಾಜಿಪುರದಲ್ಲಿ ಆಯೋಜಿಸಲಾಗಿದೆ.

ಜೂನ್‌ 9ರಂದೇ ಅಬ್ಬಾಸ್‌ ಅವರನ್ನು ಗಾಜಿಪುರ ಜೈಲಿಗೆ ಸ್ಥಳಾಂತರಿಸಲು ಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಜೂನ್‌ 11 ಮತ್ತು 12ರಂದು ಪೊಲೀಸ್‌ ವಶದಲ್ಲೇ ಅವರು ತಮ್ಮ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಲು ಅವಕಾಶ ಮಾಡಿಕೊಡುವಂತೆ ಮತ್ತು ಜೂನ್ 13ರಂದು ಕಾಸ್‌ಗಂಜ್‌ ಜೈಲಿಗೆ ಅವರನ್ನು ಮರಳಿಸುವಂತೆ ಕೂಡ ಕೋರ್ಟ್‌ ಸೂಚಿಸಿದೆ. 

ಇದಕ್ಕೂ ಮೊದಲು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ (ಎಎಜಿ) ಗರಿಮಾ ಪ್ರಶಾದ್‌ ಅವರು, ‘ಅಬ್ಬಾಸ್‌ ಅವರೇ ಒಪ್ಪಿಕೊಂಡಿರುವಂತೆ ಅವರ ತಂದೆಯ ಮರಣಕ್ಕೆ ಸಂಬಂಧಿಸಿರುವ ಯಾವ ಆಚರಣೆಗಳೂ ಬಾಕಿ ಇಲ್ಲ’ ಎಂದು ಕೋರ್ಟ್‌ಗೆ ತಿಳಿಸಿದರು. ಆದರೆ ಕೋರ್ಟ್‌ ಈ ವಾದವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT