ನವದೆಹಲಿ: ಲೈಂಗಿಕ ಅಪರಾಧ ದೃಶ್ಯ ಒಳಗೊಂಡ ಅಶ್ಲೀಲ ಚಿತ್ರ, ವಿಡಿಯೊ ಪ್ರಸರಣಕ್ಕೆ ಅಂಕುಶ ಹಾಕಲು ಗುಣಮಟ್ಟದ ಕಾರ್ಯಾಚರಣೆ ವ್ಯವಸ್ಥೆ (ಎಸ್‌ಒಪಿ) ರೂಪಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಸೋಮವಾರದ (ಡಿ.10 ) ಒಳಗಾಗಿ ನ್ಯಾಯಾಲಯಕ್ಕೆ ಎಸ್‌ಒಪಿ ಕರಡನ್ನು ಸಲ್ಲಿಸುವಂತೆ ನ್ಯಾಯಪೀಠವು ಗೂಗಲ್, ಮೈಕ್ರೋಸಾಫ್ಟ್, ಯು–ಟ್ಯೂಬ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ನಂತಹ ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿದೆ.

‘ಮಕ್ಕಳ ಅಶ್ಲೀಲ ಚಿತ್ರ, ಅತ್ಯಾಚಾರ ಮತ್ತು ಸಾಮೂಹಿಕ ಬಲಾತ್ಕಾರದ ವಿಡಿಯೊ ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ನಾಶಪಡಿಸಲು ಎಲ್ಲರ ಒಪ್ಪಿಗೆಯೂ ಇದೆ’ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ಯು.ಯು. ಲಲಿತ್ ಅವರಿದ್ದ ಪೀಠ ಹೇಳಿದೆ.

ಕಂಪನಿಗಳಿಗೆ ಕೇಂದ್ರದ ಸಲಹೆ

ಅಶ್ಲೀಲ ಚಿತ್ರ ಮತ್ತು ವಿಡಿಯೊಗಳಿಗೆ ಕಡಿವಾಣ ಹಾಕಲು ಗುಣಮಟ್ಟದ ಕಾರ್ಯಾಚರಣೆ ವ್ಯವಸ್ಥೆ ರೂಪಿಸಲು ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಕೆಲವು ಸಲಹೆ ನೀಡಿದೆ.

* ಅಶ್ಲೀಲ ಸಂದೇಶ, ಚಿತ್ರ ಮತ್ತು ದೃಶ್ಯಾವಳಿ ಗುರುತಿಸಿ, ತೆಗೆದು ಹಾಕಲು ವಿಶ್ವಾಸಾರ್ಹ ವ್ಯಕ್ತಿಗಳನ್ನು ನಿಯೋಜಿಸಬೇಕು.

* ಕಾನೂನು ಜಾರಿ ಏಜೆನ್ಸಿಗಳ ಕೋರಿಕೆ ನಿರ್ವಹಿಸಲು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಿಧಾನ ಜಾರಿಗೆ ತರಬೇಕು.

* ಭಾರತ ಮೂಲದ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.