ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

EVM ತಂತ್ರಾಂಶ ಲೆಕ್ಕಪರಿಶೋಧನೆ ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Published 22 ಸೆಪ್ಟೆಂಬರ್ 2023, 10:55 IST
Last Updated 22 ಸೆಪ್ಟೆಂಬರ್ 2023, 10:55 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯೋಗವು ಇವಿಎಂಗಳಿಗೆ ಬಳಸುತ್ತಿರುವ ತಂತ್ರಾಂಶದ ಲೆಕ್ಕಪರಿಶೋಧನೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿತು.

‘ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಹೊಣೆ. ಆಯೋಗವು ಸಾಂವಿಧಾನಿಕ ನಿಬಂಧನೆ ಉಲ್ಲಂಘಿಸಿ ಕಾರ್ಯನಿರ್ವಹಿಸಿದೆ ಎಂದು ತೋರಿಸಲು ಅರ್ಜಿದಾರರು ನ್ಯಾಯಾಲಯದ ಮುಂದೆ ಯಾವುದೇ ಕ್ರಮಬದ್ಧವಾದ ದಾಖಲೆಗಳನ್ನು ಸಲ್ಲಿಸಿಲ್ಲ. ಇವಿಎಂಗಳ ಮೇಲೆ ಶಂಕೆ ಮೂಡುವಂತಹ ಯಾವುದೇ ಪೂರಕ ದಾಖಲೆಗಳೂ ನಮ್ಮ ಮುಂದಿಲ್ಲ. ಹಾಗಾಗಿ, ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುತ್ತಿಲ್ಲ’ ಎಂದು ಪೀಠ ಹೇಳಿದೆ.

ಅರ್ಜಿದಾರ ಸುನಿಲ್‌ ಅಹ್ಯ ಅವರು ಪಿಐಎಲ್‌ ಸಲ್ಲಿಸುವುದಕ್ಕೂ ಮೊದಲು ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಿದ್ದರು.

‘ಇವಿಎಂನ ಮಿದುಳು ಎನಿಸಿರುವ ತಂತ್ರಾಂಶದ ಮೇಲೆಯೇ ಪ್ರಜಾಪ್ರಭುತ್ವದ ಉಳಿವು ನಿಂತಿದೆ’ ಎಂದು ಪ್ರತಿಪಾದಿಸಿದ ಅರ್ಜಿದಾರರು, ತಂತ್ರಾಂಶದ ಲೆಕ್ಕಪರಿಶೋಧನೆಗೆ ಒಳಪಡಿಸಲು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT