ನವದೆಹಲಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಏಳು ದಿನಗಳ ರಜೆ ಇರಲಿದ್ದು, ಈ ಸಂದರ್ಭದಲ್ಲಿತ್ವರಿತ ವಿಚಾರಣೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗೆ ರಜಾ ಕಾಲದ ನ್ಯಾಯಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.
ಹೋಳಿ ದಿನವನ್ನು ಹೊರತುಪಡಿಸಿ ಆ ವಾರದಲ್ಲಿ ಈ ನ್ಯಾಯಪೀಠ ಕಾರ್ಯನಿರ್ವಹಿಸಲಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಹೇಳಿದರು.ಪ್ರಸ್ತುತ ಬೇಸಿಗೆ ರಜೆಯಲ್ಲಿ ಮಾತ್ರ ರಜಾ ಕಾಲದ ನ್ಯಾಯಪೀಠವಿತ್ತು.