ಗುವಾಹಟಿ: 9 ವರ್ಷದ ಬಾಲಕಿಯೊಬ್ಬಳನ್ನು ಮಣಿಪುರ ಸರ್ಕಾರ ರಾಜ್ಯದ ಹಸಿರು ರಾಯಭಾರಿಯನ್ನಾಗಿ ನೇಮಿಸಿದೆ.

ಕಾಕ್ಚಿಂಗ್ ಜಿಲ್ಲೆಯ ಬಾಲಕಿ ಎಲಂಗ್ಬಂ ವ್ಯಾಲೆಂಟಿನಾ ದೇವಿ, ತಾನು ಬೆಳೆಸಿದ್ದ ಎರಡು ಮರಗಳನ್ನು ರಸ್ತೆ ವಿಸ್ತರಣೆ ಯೋಜನೆಗಾಗಿ ಕಡಿದಿದ್ದನ್ನು ಕಂಡು ಕಣ್ಣೀರು ಸುರಿಸಿದ್ದಳು. ಈ ವಿಡಿಯೊ ಕಳೆದ ವಾರವಷ್ಟೆ ವೈರಲ್ ಆಗಿತ್ತು.

ಇದಾದ ಬೆನ್ನಲ್ಲೆ ರಾಜ್ಯ ಸರ್ಕಾರದ ‘ಹಸಿರು ಮಣಿಪುರ’ ಯೋಜನೆ ಹಾಗೂ ಸಸಿ ನೆಡುವ ಎಲ್ಲಾ ಚಟುವಟಿಕೆಗಳಿಗೂ ಒಂದು ವರ್ಷ ಅವಧಿಗೆ ದೇವಿಯನ್ನು ರಾಯಭಾರಿಯಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.

‘ಸಮಾಧಾನ ಪಡಿಸಲು 20 ಸಸಿ ನೀಡಲಾಯಿತು.ಆದರೆ ಇಷ್ಟು ಸಾಲದು ಎನಿಸಿ ಹಸಿರು ರಾಯಭಾರಿಯಾಗಿ ನೇಮಿಸಲು ಸೂಚಿಸಿದೆ’ ಎಂದು ಸಿ.ಎಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.