ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ: ಗೋಯಲ್‌ ಬೆಂಬಲಿಗರ ಪ್ರತಿಭಟನೆ

Published 22 ಅಕ್ಟೋಬರ್ 2023, 16:09 IST
Last Updated 22 ಅಕ್ಟೋಬರ್ 2023, 16:09 IST
ಅಕ್ಷರ ಗಾತ್ರ

ಗ್ವಾಲಿಯರ್ (ಮಧ್ಯಪ್ರದೇಶ), (ಪಿಟಿಐ): ವಿಧಾನಸಭಾ ಚುನಾವಣೆಗೆ ಟಿಕೆಟ್‌ ನಿರಕಾರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ‌ ಅವರ ನಿಷ್ಠ, ಬಿಜೆಪಿ ಮುಖಂಡ ಮುನ್ನಾಲಾಲ್ ಗೋಯಲ್ ಅವರ ಬೆಂಬಲಿಗರು ಭಾನುವಾರ ಗ್ವಾಲಿಯರ್‌ನ ಜಯವಿಲಾಸ ಅರಮನೆ ಹೊರಗೆ ಪ್ರತಿಭಟನೆ ನಡೆಸಿದರು.‌

ಗ್ವಾಲಿಯರ್ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಗೋಯಲ್ ಬದಲು ಬಿಜೆಪಿ ಈ ಬಾರಿ ಮಾಯಾ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

‘ಅನೇಕ ವರ್ಷಗಳಿಂದ ಜನರ ನಡುವೆ ಇಲ್ಲದಿದ್ದವರಿಗೆ ಟಿಕೆಟ್ ನೀಡಲಾಗಿದೆ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇನೆ. ಐದು ವರ್ಷಗಳಿಂದ ಜನರಿಗಾಗಿ ದಣಿವರಿಯದೆ ಕೆಲಸ ಮಾಡಿದ್ದೇನೆ’ ಎಂದು ಗೋಯಲ್‌ ಹೇಳಿದರು. 

‘ಪಕ್ಷದ ಕಾರ್ಯಕರ್ತರ ಶಕ್ತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಮುನ್ನಾ (ಗೋಯಲ್) ಪರ ನಿಂತು, ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ’ ಎಂದು ಸಿಂಧಿಯಾ ಹೇಳಿದರು. ಬಳಿಕ ಪ್ರತಿಭಟನಕಾರರು ತೆರಳಿದರು. 

ಗೋಯಲ್ 2018ರ ಚುನಾವಣೆಯಲ್ಲಿ ಗ್ವಾಲಿಯರ್ ಪೂರ್ವದಿಂದ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಅವರು ಸೇರಿದಂತೆ ಸಿಂಧಿಯಾಗೆ ನಿಷ್ಠರಾಗಿರುವ ಅನೇಕ ಶಾಸಕರು 2020ರಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು. ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತು. ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೋಯಲ್ ಸೋತರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT