ಜಮ್ಮು: ಉಗ್ರರ ದಮನ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸೇನೆಯು, ಜಮ್ಮು– ಕಾಶ್ಮೀರದ ಕಠುವಾ ಹಾಗೂ ರಜೌರಿ ಜಿಲ್ಲೆಗಳಲ್ಲಿ ತನ್ನ ಶೋಧವನ್ನು ವಿಸ್ತರಿಸಿದೆ.
ಕಠುವಾ ಜಿಲ್ಲೆಯ ಬಿಲ್ಲವರ ತಹಸಿಲ್‌ನ ಕೋಗ್-ಮಂಡಲಿಯಲ್ಲಿ ಶನಿವಾರ ಸಂಜೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾದರೆ, ಉಗ್ರನೊಬ್ಬ ಹತನಾಗಿದ್ದ. ಪೊಲೀಸ್ ಅಧಿಕಾರಿಗಳಿಬ್ಬರು ಗಾಯಗೊಂಡಿದ್ದರು.
ರಜೌರಿ ಜಿಲ್ಲೆಯ ಥನಮಂಡಿ ಪ್ರದೇಶದ ಮನಿಯಾಲ್ ಗಾಲಿಯಲ್ಲಿ ಭಾನುವಾರ ಸಂಜೆ ಗುಂಡಿನ ಚಕಮಕಿ ನಡೆದಿದೆ.
ಕಠುವಾ ಜಿಲ್ಲೆಯಲ್ಲಿ ಮೂರು ದಿನದಿಂದಲೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಸೋಮವಾರ ಬಿರುಸು ಪಡೆದಿತ್ತು.