ಮಹಾಕುಂಭ್ ನಗರ, ಉತ್ತರಪ್ರದೇಶ: ‘ಗೋ ಹತ್ಯೆ ನಿಷೇಧಿಸುವ ಕುರಿತು ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವು ನೀಡಿರುವ ಉತ್ತರಾಖಂಡ ಶಂಕರಾಚಾರ್ಯ ಜೋತಿರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಮಾರ್ಚ್ 17ರ ಬಳಿಕ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೆಕ್ಟರ್–19ರಲ್ಲಿರುವ ಶಂಕರಾಚಾರ್ಯ ಶಿಬಿರದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಗೋವಿನ ದೇಹದಲ್ಲಿ 33 ಕೋಟಿ ದೇವರು ನೆಲಸಿದ್ದಾರೆ. ಹೀಗಾಗಿ, ಕಳೆದ ಒಂದೂವರೆ ವರ್ಷದಿಂದ ಗೋಹತ್ಯೆ ನಿಷೇಧಿಸಿ, ರಾಷ್ಟ್ರಮಾತ ಎಂದು ಘೋಷಿಸಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

‘ಮಾಘಿ ಪೂರ್ಣಿಮೆಯ ಮರುದಿನದಿಂದ 33 ದಿನಗಳ ಕಾಲ ದೀರ್ಘಯಾತ್ರೆ ಆರಂಭಿಸಲಿದ್ದು, ಮಾ.17ರಂದು ಈ ಯಾತ್ರೆಯು ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಕೇಂದ್ರ ಸರ್ಕಾರವು 33 ದಿನದಲ್ಲಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಮಾ.17ರ ಸಂಜೆ 5 ಗಂಟೆಗೆ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಗೋವನ್ನು ಪ್ರಾಣಿಗಳ ವರ್ಗದಿಂದ ಕೈಬಿಡಬೇಕು. ಗೋಹತ್ಯೆ ನಿಷೇಧಿಸಿ, ರಾಷ್ಟ್ರಮಾತಾ ಎಂದು ಘೋಷಿಸಬೇಕು. ಗೋವಿನ ಕುರಿತಾಗಿ ರಾಜ್ಯಗಳು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಬೇಕು’ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.