ಗುವಾಹಟಿ: ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೊಗಳನ್ನು ಸೃಷ್ಟಿಸಿ ಪ್ರಸಾರ ಮಾಡಿದ ಆರೋಪದ ಮೇಲೆ ಅಸ್ಸಾಂನ ವಿವಿಧ ಭಾಗಗಳಿಂದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಘಟಕಗಳ ಸಹಯೋಗದೊಂದಿಗೆ ಗುರುವಾರ ರಾಜ್ಯದಾದ್ಯಂತ ನಡೆಸಲಾದ ಕಾರ್ಯಾಚರಣೆಯಲ್ಲಿ ಅಪರಾಧ ತನಿಖಾ ಇಲಾಖೆಯು ಈ ಆರೋಪಿಗಳನ್ನು ಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ವಿಷಯಗಳನ್ನು (ಸಿಎಸ್ಇಎಎಮ್) ಕೇಂದ್ರೀಕೃತವಾಗಿ ವರದಿ ಮಾಡಲು ರಚಿಸಲಾದ ವ್ಯವಸ್ಥೆಯಾದ ‘ಸೈಬರ್ ಟಿಪ್ಲೈನ್’ನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸೈಬರ್ ಟಿಪ್ಲೈನ್ ವಿವಿಧ ಸಾಮಾಜಿಕ ಮಾಧ್ಯಮಗಳು ಮತ್ತು ವೆಬ್ಸೈಟ್ಗಳಿಂದ ಸಿಎಸ್ಇಎಎಮ್ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತದೆ.

ಬಂಧಿತರಲ್ಲಿ ಮೂವರು ಗೋಲಾಘಾಟ್ ಜಿಲ್ಲೆಯವರಾಗಿದ್ದು, ಕಾಮರೂಪ ಮೆಟ್ರೋಪಾಲಿಟನ್, ಕಾಮರೂಪ, ಬಾರ್ಪೆಟಾ, ಬಜಾಲೀ ಜಿಲ್ಲೆಗಳ ತಲಾ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಪೋಕ್ಸೊ ಮತ್ತು ಐಟಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.