ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ | ಆಸ್ಪತ್ರೆ, ತಿಹಾರ್ ಜೈಲಿಗೆ ಬಾಂಬ್ ಬೆದರಿಕೆ: ವಾರದಲ್ಲಿ 2ನೇ ಯತ್ನ

Published 14 ಮೇ 2024, 13:47 IST
Last Updated 14 ಮೇ 2024, 13:47 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯ 20 ಆಸ್ಪತ್ರೆಗಳು, ವಿಮಾನ ನಿಲ್ದಾಣ, ಉತ್ತರ ವಲಯ ರೈಲ್ವೆಗೆ ಬೆದರಿಕೆ ಇ–ಮೇಲ್ ಬಂದ ಎರಡು ದಿನಗಳ ಬಳಿಕ, ಏಳು ಆಸ್ಪತ್ರೆ ಮತ್ತು ತಿಹಾರ್ ಜೈಲಿಗೆ ಅದೇ ಮಾದರಿಯ ಬೆದರಿಕೆಯ ಸಂದೇಶ ಮಂಗಳವಾರ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

courtisgod123@beeble.com ನಿಂದ ಈ ಸಂದೇಶ ಕಳುಹಿಸಲಾಗಿದೆ. ಇದು ಯುರೋಪ್ ಮೂಲದ ಇಮೇಲ್ ಸೇವಾ ಕಂಪನಿಯಾಗಿದೆ. ಭಾನುವಾರ ಕಳುಹಿಸಲಾದ ಸಂದೇಶವನ್ನೇ ಮತ್ತೆ ಕಳುಹಿಸಲಾಗಿದೆ. ‘ನಿಮ್ಮ ಕಟ್ಟಡದಲ್ಲಿ ಸ್ಪೋಟಕ ಇರುವ ಸಾಧವನ್ನು ಅಳವಡಿಸಲಾಗಿದೆ. ಮುಂದಿನ ಕೆಲ ಗಂಟೆಗಳಲ್ಲಿ ಅದು ಸ್ಫೋಟಗೊಳ್ಳಲಿದೆ. ಇದು ಬೆದರಿಕೆಯಲ್ಲ. ಇನ್ನು ಕೆಲವೇ ಗಂಟೆಗಳಲ್ಲಿ ಬಾಂಬ್ ಸ್ಫೋಟಿಸಲಿದೆ. ಮುಗ್ದ ಜನರ ಪ್ರಾಣ ನಿಮ್ಮ ಕೈಯಲ್ಲಿದೆ’ ಎಂದು ಹೇಳಲಾಗಿದೆ.

‘ದೀಪ್ ಚಂದ್ ಬಂಧು ಆಸ್ಪತ್ರೆ, ಅಶೋಕ್ ವಿಹಾರ್, ದಾದಾ ದೇವ್ ಆಸ್ಪತ್ರೆ, ಹೆಡಗೆವಾರ್ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಅತ್ತಾರ್ ಸೈನ್ ಜೈನ್ ಆಸ್ಪತ್ರೆ, ಚಾಚಾ ನೆಹರು ಆಸ್ಪತ್ರೆಗೆ ಇಂಥ ಬೆದಿರಿಕೆಯ ಇ–ಮೇಲ್ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಸ್ಥಳ ಪರಿಶೀಲನೆ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಇ–ಮೇಲ್ ಎಂದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನಂತರ ತಿಹಾರ್ ಜೈಲಿನಲ್ಲೂ ಬಾಂಬ್‌ ಶೋಧ ಕಾರ್ಯ ನಡೆಯಿತು. ಅಲ್ಲಿಯೂ ಏನೂ ಪತ್ತೆಯಾಗಿಲ್ಲ. ಎರಡೆರಡು ಬಾರಿ ತಪಾಸಣೆ ಶೋಧ ನಡೆಸಲಾಯಿತು. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದಿದ್ದಾರೆ.

ಶೋಧ ಕಾರ್ಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ತುರ್ತು ಚಿಕಿತ್ಸೆಗಳನ್ನು ಮುಂದುವರಿಸಲಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT