ತೈಲ ಅಪಾಯಕಾರಿ ವಸ್ತುಗಳು ವಿವಿಧ ದೇಶಗಳ ಹಲವು ಉತ್ಪನ್ನಗಳನ್ನು ಹೊತ್ತಿದ್ದ ಲೈಬೀರಿಯಾದ ಹಡಗಿನ 643 ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದು ಈ ಪೈಕಿ 13 ಕಂಟೇನರ್‌ಗಳು ಕೇರಳದ ಕರಾವಳಿಯ ವಿವಿಧ ಪ್ರದೇಶ ದಂಡೆಗಳಿಗೆ ಬಂದು ಬಿದ್ದಿವೆ. ಅವುಗಳ ಪೈಕಿ ಕೆಲವು ಕಂಟೇನರ್‌ಗಳಲ್ಲಿ ಬಟ್ಟೆಗಳು ಚೀನಾದ ಚಹಾ ಪುಡಿ ಗಾಜಿನ ವಸ್ತುಗಳು ಕಂಡುಬಂದಿವೆ ಎಂದು ಕೇರಳ ಸರ್ಕಾರ ಸೋಮವಾರ ಹೇಳಿದೆ. ಇನ್ನೂ ಕೆಲವು ಕಂಟೇನರ್‌ಗಳು ಖಾಲಿಯಾಗಿದ್ದು ಅವುಗಳಲ್ಲಿ ತೈಲ ಏನಾದರೂ ತುಂಬಿಸಲಾಗಿತ್ತೆ? ಅದು ಸಮುದ್ರದಲ್ಲಿ ಸೋರಿಕೆಯಾಗಿರಬಹುದೆ? ಎಂಬ ಶಂಕೆಯೂ ವ್ಯಕ್ತವಾಗಿದೆ.