ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂದೆ ನೇತೃತ್ವದ ಶಿವಸೇನಾವನ್ನು ಮಾತ್ರ ಗುರುತಿಸಲಾಗಿದೆ: ಮಹಾ ಸ್ಪೀಕರ್‌

Last Updated 23 ಫೆಬ್ರುವರಿ 2023, 14:08 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪ್ರತ್ಯೇಕ ಪಕ್ಷ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿನ ಪ್ರಾತಿನಿಧ್ಯವೂ ವಿಧಾನಸಭೆಯಲ್ಲಿ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು ಮಂಗಳವಾರ ಹೇಳಿದ್ದಾರೆ. ಜೊತೆಗೆ, ಶಿಂದೆ ನೇತೃತ್ವದ, 55 ಶಾಸಕರ ಬಲ ಇರುವ ಶಿವಸೇನಾವನ್ನು ಮಾತ್ರ ತಾವು ಗುರುತಿಸಿರುವುದಾಗಿ ಹೇಳಿದ್ದಾರೆ.

ಫೆಬ್ರುವರಿ 27ರಿಂದ ಮಾರ್ಚ್‌ 25ರ ವರೆಗೆ ರಾಜ್ಯದ ಬಜೆಟ್‌ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಅವರು ಹೀಗೆ ಹೇಳಿದ್ದಾರೆ.

‘ಈ ವರೆಗೂ ಶಿವಸೇನಾದ ಮತ್ತೊಂದು ಬಣದಿಂದ ಯಾವುದೇ ಪ್ರಾತಿನಿಧ್ಯ ಕಂಡುಬಂದಿಲ್ಲ. ಒಂದು ವೇಳೆ ನನಗೆ ಪತ್ರ ಬಂದರೆ, ಸಂವಿಧಾನದ 10ನೇ ಪರಿಚ್ಛೇದದ (ಪಕ್ಷಾಂತರ ಕುರಿತ ಪರಿಚ್ಛೇದ) ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣವನ್ನೇ ನಿಜವಾದ ಶಿವಸೇನಾ ಎಂದು ಗುರುತಿಸಿದ ಚುನಾವಣಾ ಆಯೋಗ (ಇ.ಸಿ), ಶಿಂದೆ ಬಣಕ್ಕೆ ಬಿಲ್ಲು, ಬಾಣದ ಚಿಹ್ನೆ ಬಳಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಾರ್ವೇಕರ್‌ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT