ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಜಾತ್ ಬುಖಾರಿ ಹತ್ಯೆಗೆ ಪಾಕಿಸ್ತಾನದಲ್ಲಿ ಸಂಚು: ಶಂಕಿತರ ಚಿತ್ರ ಬಿಡುಗಡೆ

Last Updated 28 ಜೂನ್ 2018, 13:19 IST
ಅಕ್ಷರ ಗಾತ್ರ

ಶ್ರೀನಗರ:'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರ ಹತ್ಯೆಗೆ ಪಾಕಿಸ್ತಾನದಲ್ಲಿ ಸಂಚು ರೂಪಿಸಲಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಗುರುವಾರ ಮಾಹಿತಿ ನೀಡಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ನಾಲ್ವರು ಶಂಕಿತ ಹಂತಕರ ಭಾವಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.ಪಾಕಿಸ್ತಾನದಲ್ಲಿ ರೂಪಿಸಲಾದ ಹತ್ಯೆ ಸಂಚನ್ನು ಲಷ್ಕರ್‌-ಎ-ತಯಬಾ ಉಗ್ರ ಸಂಘಟನೆ ಕಾರ್ಯಗತಗೊಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಐಜಿಪಿ, ಎಸ್‌.ಪಿ.ಪಾಣಿ ಹೇಳಿದ್ದಾರೆ.

ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ಹಂತಕರುಜೂನ್ 14ರಂದು ಶುಜಾತ್ ಅವರಿದ್ದ ಕಾರಿನ ಮೇಲೆ ಗುಂಡಿನ ಮಳೆಗರೆದಿದ್ದರು. ದಾಳಿಯಲ್ಲಿ ಶುಜಾತ್‌ ಅವರ ಇಬ್ಬರು ಭದ್ರತಾ ಸಿಬ್ಬಂದಿ ಸಹ ಸಾವಿಗೀಡಾಗಿದ್ದರು.

30 ವರ್ಷಗಳಿಂದ ಪತ್ರಕರ್ತನಾಗಿದ್ದ ಶುಜಾತ್‌ ಕಾಶ್ಮೀರದ ಮುಖ್ಯ ಧ್ವನಿಯಾಗಿದ್ದರು.

ಶಂಕಿತ ಹಂತಕರನ್ನು ಶೇಖ್‌ ಸಜ್ಜದ್‌ ಗುಲ್‌, ಆಜಾದ್‌ ಅಹ್ಮದ್‌ ಮಲಿಕ್‌, ನವೀದ್‌ ಜಟ್‌ ಹಾಗೂ ಮುಜಾಫರ್‌ ಅಹ್ಮದ್‌ ಭಟ್‌ ಎಂದು ಗುರುತಿಸಲಾಗಿದೆ. ಶ್ರೀನಗರ ಮೂಲದವನಾದಶೇಖ್‌ ಸಜ್ಜದ್‌ ಗುಲ್‌ 2017ರ ಮಾರ್ಚ್‌ನಲ್ಲಿ ಪಾಕಿಸ್ತಾನ ಸೇರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಹಂತಕರಲ್ಲಿ ಇಬ್ಬರು ಕಾಶ್ಮೀರದವರಾಗಿದ್ದು ಓರ್ವ ಪಾಕಿಸ್ತಾನಿಯಾಗಿದ್ದಾನೆ.ಪಾಕಿಸ್ತಾನ ಮೂಲದ ಆರೋಪಿಯನ್ನು ನವೀದ್ ಜಟ್ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT