ನವದೆಹಲಿ: ಜಿಐ ಟ್ಯಾಗ್ ಪಡೆದ ಸಿಕ್ಕಿಂನ ಕೆಂಪು ಮೆಣಸಿನಕಾಯಿಯನ್ನು ಸೊಲೊಮನ್ ದ್ವೀಪಕ್ಕೆ ರಫ್ತು ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಸಿಕ್ಕಿಂನ ಕೆಂಪು ಮೆಣಸಿನಕಾಯಿಯನ್ನು ದಲ್ಲೆ ಚಿಲ್ಲಿ, ಫೈರ್ ಬಾಲ್ ಚಿಲ್ಲಿ ಅಥವಾ ದಲ್ಲೆ ಖುರ್ಸಾನಿ ಎಂದು ಕರೆಯಲಾಗುತ್ತದೆ.

ತೀಕ್ಷ್ಣ ಘಾಟು, ಕೆಂಪು ಬಣ್ಣ, ವಿಟಮಿನ್ ಎ, ಸಿ, ಇ, ಪೊಟ್ಯಾಶಿಯಂನಂತಹ ಪೌಷ್ಟಿಕಾಂಶಗಳು ಹೇರಳವಾಗಿ ಈ ಮೆಣಸಿನಕಾಯಿಯಲ್ಲಿದೆ. ದಕ್ಷಿಣ ಸಿಕ್ಕಿಂನ ರೈತರಿಂದ ಮತ್ತು ರೈತ ಸಂಘಟನೆಗಳಿಂದ 15 ಸಾವಿರ ಕೆ.ಜಿ ತಾಜಾ ಮೆಣಸಿನಕಾಯಿಯನ್ನು ಪಡೆದು ರಫ್ತು ಮಾಡಲಾಗಿದೆ. ಕೆ.ಜಿಗೆ ₹250–₹300ರಂತೆ ಖರೀದಿ ಮಾಡಲಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಕೃಷಿ ಉತ್ಪನ್ನ, ನೈಸರ್ಗಿಕ ಅಥವಾ ತಯಾರಿಸುವ ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗುತ್ತದೆ. ಜಿಐ ಟ್ಯಾಗ್ ಉತ್ಪನ್ನದ ಗುಣಮಟ್ಟ ಮತ್ತು ವಿಶಿಷ್ಟತೆಯ ಬಗ್ಗೆ ಭರವಸೆಯನ್ನು ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.