ನವದೆಹಲಿ: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಅವರೊಂದಿಗೆ ಬಂದಿದ್ದ ಇತರ 150 ಜನರನ್ನು ದೆಹಲಿ ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.

ಸಂವಿಧಾನದ 6ನೇ ಪರಿಚ್ಛೇದಕ್ಕೆ ಲಡಾಖ್ ಸೇರಿಸುವಂತೆ ಒತ್ತಾಯಿಸಿ ಲೇಹ್‌ನಿಂದ ಪಾದಯಾತ್ರೆ ಮೂಲಕ ದೆಹಲಿ ತಲುಪಿದ್ದ ವಾಂಗ್ಚುಕ್ ಮತ್ತು ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ 150 ಜನರನ್ನು ದೆಹಲಿ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದರು.

‘ನಿಷೇಧಾಜ್ಞೆ ಜಾರಿಯಲ್ಲಿದ್ದು ಪಾದಯಾತ್ರೆ ನಿಲ್ಲಿಸಿ ಮರಳುವಂತೆ ವಾಂಗ್ಚುಕ್ ಮತ್ತು ಇತರ ಬಂಧಿತ ಲಡಾಖಿಗಳಿಗೆ ತಿಳಿಸಲಾಯಿತು. ಆದರೆ, ಅವರು ಅದನ್ನು ಒಪ್ಪಲಿಲ್ಲ. ಮಧ್ಯ ದೆಹಲಿ ಕಡೆಗೆ ಪಾದಯಾತ್ರೆ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಮತ್ತೆ ಬಂಧಿಸಬೇಕಾಯಿತು’ ಎಂದು ಹಿರಿಯ ಪೊಲೀಸರ್ ಅಧಿಕಾರಿಯೊಬ್ಬರು ಪಿಟಿಐಗೆ ಹೇಳಿದ್ದಾರೆ.

ವಾಂಗ್ಚುಕ್ ಅವರನ್ನು ಬವಾನಾ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಇತರರನ್ನು ನರೇಲಾ ಇಂಡಸ್ಟ್ರಿಯಲ್ ಏರಿಯಾ, ಅಲಿಪುರ್ ಮತ್ತು ಕಾಂಝವಾಲಾ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಗಾಂಧಿ ಜಯಂತಿ ದಿನವಾದ ಇಂದು ದೆಹಲಿಯನ್ನು ತಲುಪಿ, ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂಬುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅದಕ್ಕೂ ಅವಕಾಶ ನಿರಾಕರಿಸಲಾಗಿದೆ’ ಎಂದು ಲೇಹ್ ಅಪೆಕ್ಸ್ ಬಾಡಿ ಸಂಯೋಜಕ ಜಿಗ್ಮತ್ ಪಾಲ್ಜೋರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.