ಮಂಗಳವಾರ, 17 ಮಾರ್ಚ್ 2026
×
ADVERTISEMENT

ಹುಬ್ಬಳ್ಳಿ | ಉಣಕಲ್‌ ಕೆರೆ: ಮತ್ತೆ ಬೆಳೆದ ‘ಕಳೆ’

ಕೆರೆಯ ಜಲಕಳೆ ತೆಗೆಯಲು ಕೆಲವೇ ಸಿಬ್ಬಂದಿ ನಿಯೋಜನೆ: ಸ್ಥಳೀಯರ ಆರೋಪ
Published : 16 ಫೆಬ್ರುವರಿ 2026, 7:07 IST
Last Updated : 16 ಫೆಬ್ರುವರಿ 2026, 7:07 IST
ADVERTISEMENT
ಫಾಲೋ ಮಾಡಿ
Comments
ಧಾರವಾಡದ ಕೆಲಗೇರಿ ಕೆರೆಯಲ್ಲಿ ಬೆಳೆದಿದ್ದ ಜಲಕಳೆಯನ್ನು ಈಚೆಗೆ ಬೆಂಗಳೂರಿನಿಂದ ಬಂದ ಯಂತ್ರದಿಂದ ಪ್ರಾಯೋಗಿಕವಾಗಿ ತೆಗೆಯಲಾಯಿತು
ಧಾರವಾಡದ ಕೆಲಗೇರಿ ಕೆರೆಯಲ್ಲಿ ಬೆಳೆದಿದ್ದ ಜಲಕಳೆಯನ್ನು ಈಚೆಗೆ ಬೆಂಗಳೂರಿನಿಂದ ಬಂದ ಯಂತ್ರದಿಂದ ಪ್ರಾಯೋಗಿಕವಾಗಿ ತೆಗೆಯಲಾಯಿತು
ಜಲಕಳೆ ತೆಗೆಯಲು ಹಾಗೂ ಇಲ್ಲಿನ ನೀರಿನ ಗುಣಮಟ್ಟ ಕಾಪಾಡಲು ಪಾಲಿಕೆಯಿಂದ ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತಿದೆ. ಮೊದಲು ಕೆರೆಗೆ ಸೇರುವ ಕೊಳಚೆ ನೀರಿಗೆ ಕಡಿವಾಣ ಹಾಕಬೇಕು.
ರಾಮಣ್ಣ ಉಣಕಲ್‌ ಗ್ರಾಮದ ನಿವಾಸಿ
ಕಳೆ ತೆಗೆದು ಕೆರೆಯ ದಡದಲ್ಲಿಯೇ ಹಾಕುತ್ತಾರೆ. ಇದರಿಂದ ಮತ್ತೆ ಅದು ಬೆಳೆಯುವ ಸಾಧ್ಯತೆ ಇರುತ್ತದೆ. ತೆಗೆದ ಕೂಡಲೇ ಅದನ್ನು ವಿಲೇವಾರಿ ಮಾಡಬೇಕು.
ಮಹದೇವಪ್ಪ ಉಣಕಲ್‌ ಗ್ರಾಮದ ನಿವಾಸಿ
ಉಣಕಲ್‌ ಕೆರೆಯಲ್ಲಿ ಬೆಳೆಯುವ ಕಳೆಯನ್ನು ತೆಗೆಯಲು ಹಾಗೂ ನೀರಿನ ಗುಣಮಟ್ಟ ಕಾಪಾಡಲು ಈಚೆಗೆ ಜೆಎಂಎಸ್‌ ಬಯೋಟೆಕ್‌ ಅವರಿಗೆ ₹42.30 ಲಕ್ಷ ಟೆಂಡರ್‌ ಆಗಿದ್ದು ಕಳೆ ತೆಗೆಯುತ್ತಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದೆ ವಿಠ್ಠಲ ತುಬಾಕಿ.
ಪಾಲಿಕೆಯ ಉತ್ತರ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌.
ಜಲಕಳೆ ತೆಗೆಯುವ ಯಂತ್ರ ಖರೀದಿಗೆ ಚಿಂತನೆ
‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉಣಕಲ್‌ ಕೆರೆ ತೋಳನಕೆರೆ ಸಾಧನಕೆರೆ ಕೆಲಗೇರಿ ಕೆರೆ ಸೇರಿದಂತೆ 20ಕ್ಕೂ ಅಧಿಕ ಕೆರೆಗಳಿವೆ. ಕೆಲ ಕೆರೆಗಳಲ್ಲಿ ಜಲಕಳೆ ಬೆಳೆದಿದೆ. ಇದನ್ನು ತೆಗೆಯಲು ಯಂತ್ರ ಖರೀದಿಗಾಗಿ 15ನೇ ಹಣಕಾಸು ಯೋಜನೆಯಡಿ ₹40 ಲಕ್ಷ ಮೀಸಲಿಡಲಾಗಿದೆ’ ಎನ್ನುತ್ತಾರೆ ಹು–ಧಾ ಮಹಾನಗರ ಪಾಲಿಕೆಯ ಧಾರವಾಡ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ರಿಯಾಜ್‌ ಅಹ್ಮದ್.ಐ.ಹುಬ್ಬಳ್ಳಿ. ‘ಧಾರವಾಡದ ಕೆಲಗೇರಿ ಕೆರೆಯಲ್ಲಿ ಬೆಳೆದಿದ್ದ ಜಲಕಳೆ ತೆಗೆಯಲು ಈಚೆಗೆ ಬೆಂಗಳೂರಿನಿಂದ ಯಂತ್ರವನ್ನು ತರಿಸಿ ಪ್ರಾಯೋಗಿಕವಾಗಿ ಜಲಕಳೆ ತೆಗೆಸಲಾಯಿತು. ಮುಂದಿನ ದಿನಗಳಲ್ಲಿ ಈ ರೀತಿಯ ಯಂತ್ರ ಖರೀದಿಸುವ ಚಿಂತನೆಯಿದೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT