ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೆಲ್ಲಿಂಗ್‌ ಬೀ: ಭಾರತ ಸಂಜಾತರ ಪಾರಮ್ಯ

ಸ್ಪರ್ಧೆಯ ಇತಿಹಾಸದಲ್ಲೇ ದಾಖಲೆ ಚಾಂಪಿಯನ್ಸ್‌
Last Updated 31 ಮೇ 2019, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್: 2019ನೇ ಸಾಲಿನ ಪ್ರತಿಷ್ಠಿತ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಭಾರತ ಸಂಜಾತ 7 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ವಿಜೇತರಲ್ಲಿ ಒಬ್ಬ ಅಮೆರಿಕ ವಿದ್ಯಾರ್ಥಿ ಇದ್ದಾರೆ.

ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯ 94 ವರ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡಕ್ಕಿಂತ ಅಧಿಕ ಸಹ–ವಿಜೇತರನ್ನು(ಕೋ–ಚಾಂಪಿಯನ್ಸ್)ಆಯ್ಕೆ ಮಾಡಲಾಗಿದೆ.

ಕ್ಯಾಲಿಫೋರ್ನಿಯಾದ ರಿಶಿಕಾ ಗಂಧಶ್ರೀ(13 ವರ್ಷ), ಮೇರಿಲ್ಯಾಂಡ್‌ನ ಸಾಕೇತ್ ಸುಂದರ್‌(13), ನ್ಯೂಜೆರ್ಸಿಯ ಶೃತಿಕಾ ಪಾದಿ(13) ಹಾಗೂ ಕ್ರಿಷ್ಟಫರ್‌ ಸೆರಾವ್‌, ಟೆಕ್ಸಾಸ್‌ನ ಸೋಹಂ ಸುಖಾಟಂಕರ್‌(13), ಅಭಿಜಯ್‌ ಕೊಡಲಿ(12), ರೋಹನ್‌ ರಾಜಾ(13) ಮತ್ತು ಅಲಬಾಮಾದ ಎರಿನ್‌ ಹಾವರ್ಡ್‌(14) ವಿಜೇತರು. ಮೇರಿಲ್ಯಾಂಡ್‌ನ ಗೇಲಾರ್ಡ್ ರಾಷ್ಟ್ರೀಯ ರೆಸಾರ್ಟ್‌ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿಇವರು 550 ಪ್ರತಿಸ್ಪರ್ಧಿಗಳನ್ನು ಸೋಲಿಸಿ ಪ್ರಶಸ್ತಿ ಬಾಚಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ.

50 ಸಾವಿರ ಡಾಲರ್‌ ಪ್ರಶಸ್ತಿ ಮೊತ್ತ: ಪ್ರತಿ ವಿಜೇತರಿಗೆ 50 ಸಾವಿರ ಡಾಲರ್‌(ಅಂದಾಜು 34 ಲಕ್ಷ) ದೊರೆಯಲಿದೆ. ಪ್ರತಿ ಸ್ಪರ್ಧಿಯೂತಮ್ಮದೇ ಆದ ತರಬೇತುದಾರರನ್ನು ಹೊಂದಿದ್ದು, ಸ್ಪರ್ಧೆಯ ಅಂತಿಮ ಐದು ಸುತ್ತಿನಲ್ಲೂ ಎಂಟು ವಿದ್ಯಾರ್ಥಿಗಳು 47 ಪದವನ್ನು ಸರಿಯಾಗಿ ಉಚ್ಚರಿಸಿದ್ದಾರೆ. ’ನಮ್ಮ ಪಟ್ಟಿಯಲ್ಲಿ ಇನ್ನೂ ಹಲವು ಪದಗಳಿವೆ. ಪ್ರಸಕ್ತ ಸಾಲಿನ ವಿಜೇತರ ಸಾಮರ್ಥ್ಯವನ್ನು ಗಮನಿಸಿದರೆ ಮುಂದೆ ಸವಾಲಿನ ಪದಗಳೇ ಖಾಲಿಯಾಗಬಹುದು ಎನ್ನುವಂತಿದೆ‘ ಎಂದು ಸ್ಪರ್ಧೆಯ ಘೋಷಕ ಜ್ಯಾಕ್ಸ್ ಬೈಲಿ ಹೇಳಿದ್ದಾರೆ.

‘ಬೀ’ನಲ್ಲಿ ಭಾರತ ಪ್ರಾಬಲ್ಯ

2018ರಲ್ಲಿ ಭಾರತೀಯ ಮೂಲದ 14 ವರ್ಷದಕಾರ್ತಿಕ್ ನೆಮ್ಮಾನಿ ಅವರು ವಿಜೇತರಾಗಿ 42 ಸಾವಿರ ಡಾಲರ್‌ ಬಾಚಿಕೊಂಡಿದ್ದರು. ಸ್ಪೆಲ್ಲಿಂಗ್‌ ಬೀ ಚಾಂಪಿಯನ್ ಪಟ್ಟ ಪಡೆದ 14ನೇ ಭಾರತ ಸಂಜಾತರಾಗಿ ಗುರುತಿಸಿ ಕೊಂಡಿದ್ದರು.2017ರಲ್ಲೂ ಅನನ್ಯ ವಿನಯ್ ಅವರು ಸ್ಪೆಲ್ಲಿಂಗ್‌ ಬೀ ಪಟ್ಟ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT