ಕೊಲಂಬೊ: ಶ್ರೀಲಂಕಾದ ಜಲ ಸರಹದ್ದಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದಡಿಯಲ್ಲಿ ಭಾರತದ ಏಳು ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಸೇನೆ ಬಂಧಿಸಿ, ದೋಣಿಯನ್ನು ವಶಕ್ಕೆ ಪಡೆದಿದೆ.

‘ತಲೈಮನ್ನಾರ್ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ವೇಳೆ ಬಂಧಿಸಲಾಗಿದ್ದು, ಕಳೆದೊಂದು ವಾರದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ’ ಎಂದು ನೌಕಾಸೇನೆ ವಕ್ತಾರರು ತಿಳಿಸಿದ್ದಾರೆ.

‘ಮನ್ನಾರ್ನಲ್ಲಿರುವ ಮೀನುಗಾರಿಕಾ ಸಚಿವಾಲಯಕ್ಕೆ ಬಂಧಿತ ಮೀನುಗಾರರನ್ನು ಹಾಗೂ ದೋಣಿಯನ್ನು ಹಸ್ತಾಂತರಿಸಲಾಗಿದೆ’ ಎಂದು ನೌಕಾಸೇನೆಯ ವಕ್ತಾರರು ತಿಳಿಸಿದ್ದಾರೆ.

ಭಾನುವಾರವಷ್ಟೇ 8 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಸೇನೆ ಬಂಧಿಸಿತ್ತು.

ಪಾಕ್ ಜಲಸಂಧಿಯು ಭಾರತ ಹಾಗೂ ಶ್ರೀಲಂಕಾ ನಡುವಿನ ಜಲ ಸರಹದ್ದು ಪ್ರತ್ಯೇಕಿಸುತ್ತದೆ. ಈ ಭಾಗವು ಮೀನುಗಾರಿಕೆಗೆ ಪ್ರಶಸ್ತ ಸ್ಥಳವಾಗಿದೆ. ಎರಡೂ ದೇಶಗಳ ಮೀನುಗಾರರು ಗಡಿದಾಡಿ ಮೀನುಗಾರಿಕೆ ನಡೆಸುವ ಕಾರಣ, ಬಂಧನಕ್ಕೆ ಒಳಗಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.