ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಮೂರ್ತಿ ವಾರಕ್ಕೆ 80ರಿಂದ 90 ಗಂಟೆ ದುಡಿದಿದ್ದಾರೆ: ಸುಧಾ ಮೂರ್ತಿ

Published 30 ಅಕ್ಟೋಬರ್ 2023, 9:40 IST
Last Updated 30 ಅಕ್ಟೋಬರ್ 2023, 10:08 IST
ಅಕ್ಷರ ಗಾತ್ರ

ಮುಂಬೈ: ‘ಭಾರತದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಯುವಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು’ ಎಂಬ ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಅವರ ಪತ್ನಿ, ಇನ್ಫೊಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ. ‘ಸ್ವತಃ ನಾರಾಯಣ ಮೂರ್ತಿ ಅವರೇ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ದುಡಿದ್ದಾರೆ, ಅದನ್ನೇ ಹೇಳಿದ್ದಾರೆ’ ಎಂದರು.

ನಾರಾಯಣ ಮೂರ್ತಿ ಅವರ ಹೇಳಿಕೆ ಕುರಿತಂತೆ ದೇಶದಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸುದ್ದಿ ವಾಹಿನಿ ನ್ಯೂಸ್‌ 18ಗೆ ಪ್ರತಿಕ್ರಿಯೆ ನೀಡಿದ ಅವರು, ‘ ಕಠಿಣ ಪರಿಶ್ರಮದ ಬಗ್ಗೆ ನಾರಾಯಣ ಮೂರ್ತಿ ಅವರು ನಂಬಿಕೆ ಹೊಂದಿದ್ದರು. ಅದೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ’ ಎಂದರು.

‘ಅವರು (ನಾರಾಯಣ ಮೂರ್ತಿ) ವಾರಕ್ಕೆ 80ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಇದಕ್ಕಿಂತ ಕಡಿಮೆ ಕೆಲಸ ಮಾಡುವ ಬಗ್ಗೆ ಅವರಿಗೆ ತಿಳಿದಿಲ್ಲ. ಕಠಿಣ ಪರಿಶ್ರಮದ ಬಗ್ಗೆ ಅವರಿಗೆ ಬಹಳ ನಂಬಿಕೆಯಿದೆ. ಅವರು ಏನು ನಂಬಿದ್ದರೋ ಅದನ್ನೇ ಹೇಳಿದ್ದಾರೆ’ ಎಂದು ಪತಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್‌ ಕಚೇರಿಗಳಲ್ಲಿ ವೃತ್ತಿ ಸಂಸ್ಕೃತಿ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸುಧಾ ಮೂರ್ತಿ, ‘ಈ ವಿಷಯದಲ್ಲಿ ಜನರು ತಮ್ಮದೇ ಆದ ಅಭಿವ್ಯಕ್ತಿ ಹೊಂದಿದ್ದಾರೆ. ನಾರಾಯಣ ಮೂರ್ತಿ ಅವರು ಏನು ಹೇಳಿದ್ದಾರೋ, ಹಾಗೇಯೇ ಇದ್ದವರು. ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆಯಷ್ಟೇ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT