ಚೆನ್ನೈ: ದೇಶದ ಅತಿದೊಡ್ಡ ಟಿಲಿವಿಷನ್ ಜಾಲಗಳಲ್ಲಿ ಒಂದಾಗಿರುವ ಸನ್ ಟಿವಿಯ ಮಾಲೀಕತ್ವಕ್ಕೆ ಸಂಬಂಧಿಸಿ ಮಾರನ್ ಸಹೋದರರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ.

ಕಂಪನಿಯ ಷೇರುಗಳ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ, ಡಿಎಂಕೆ ಸಂಸದರೂ ಆಗಿರುವ ದಯಾನಿಧಿ ಮಾರನ್, ತಮ್ಮ ಅಣ್ಣ ಹಾಗೂ ಕಂಪನಿಯ ಮುಖ್ಯಸ್ಥ ಕಲಾನಿಧಿ ಮಾರನ್, ಅವರ ಪತ್ನಿ ಕಾವೇರಿ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.

ಅಲ್ಲದೆ, ಸನ್ ಟಿವಿ ಕಂಪನಿಯ ಕಾರ್ಯದರ್ಶಿ ರವಿ ರಾಮಮೂರ್ತಿ, ಲೆಕ್ಕಪರಿಶೋಧಕ ಶಿವಸುಬ್ರಮಣಿಯನ್ ಸೇರಿ ಇತರ ಆರು ಜನರಿಗೂ ದಯಾನಿಧಿ ಮಾರನ್ ನೋಟಿಸ್ ಕಳುಹಿಸಿದ್ದಾರೆ.

ಚೆನ್ನೈ ವಕೀಲ ಕೆ.ಸುರೇಶ ಅವರ ಮೂಲಕ ಜೂನ್ 10ರಂದು ಈ ನೋಟಿಸ್ ನೀಡಲಾಗಿದೆ.

ದಯಾನಿಧಿ ಅವರು ಯುಪಿಎ–1 ಹಾಗೂ ಯುಪಿಎ–2 ಸರ್ಕಾರಗಳಲ್ಲಿ ದೂರಸಂಪರ್ಕ ಮತ್ತು ಜವಳಿ ಸಚಿವರಾಗಿದ್ದರು.

ಕಲಾನಿಧಿ ಮತ್ತು ದಯಾನಿಧಿ ಅವರು ಕಳೆದ ಕೆಲ ವರ್ಷಗಳಿಂದ ಮಾತನಾಡುತ್ತಿರಲಿಲ್ಲ ಎಂಬ ವದಂತಿಗಳು ಇದ್ದವು. ಈಗ, ಕಲಾನಿಧಿ ಅವರಿಗೆ ದಯಾನಿಧಿ ನೋಟಿಸ್ ಕಳುಹಿಸಿರುವುದು ಸಹೋದರರ ನಡುವಿನ ಒಡಕು ಬಹಿರಂಗಗೊಳ್ಳುವಂತೆ ಮಾಡಿದೆ ಎಂದು ಮೂಲಗಳು ಹೇಳಿವೆ.

ಬೆದರಿಕೆ: ಅಣ್ಣ ಕಲಾನಿಧಿ ಮಾರನ್ ಅವರು ಹಣ ಅಕ್ರಮ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ದಯಾನಿಧಿ, ಸನ್ ಗ್ರೂಪ್ನ ಎಲ್ಲಾ ಪರವಾನಗಿಗಳನ್ನು ತಕ್ಷಣವೇ ರದ್ದು ಮಾಡುವಂತೆ ಕೋರಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಕೋರಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಸಂಸ್ಥೆ ಹೊರತರುತ್ತಿರುವ ಪತ್ರಿಕೆಗಳ ನೋಂದಣಿ ಹಾಗೂ ಪ್ರಕಾಶನಕ್ಕೆ ಸಂಬಂಧಿಸಿದ ಪರವಾನಗಿಗಳನ್ನು ಕೂಡ ರದ್ದುಗೊಳಿಸುವಂತೆ ರಜಿಸ್ಟ್ರಾರ್ ಆಫ್ ನ್ಯೂಸ್ಪೇಪರ್ಸ್ ಫಾರ್ ಇಂಡಿಯಾಕ್ಕೂ ಮನವಿ ಮಾಡಲಾಗುವುದು ಎಂದಿದ್ದಾರೆ.

ಸನ್ರೈಜರ್ಸ್ ಹೈದರಾಬಾದ್ ತಂಡದ ಫ್ರಾಂಚೈಸ್ಗೆ ಸಂಬಂಧಿಸಿದ ಪರವಾನಗಿಯನ್ನು ರದ್ದು ಮಾಡಬೇಕು ಎಂದು ಕೋರಿ ಬಿಸಿಸಿಐಗೆ ಕೋರಲಾಗುವುದು. ಸ್ಪೈಸ್ ಜೆಟ್ ಲಿಮಿಟೆಡ್ ಪರವಾನಗಿ ರದ್ದುಪಡಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಕೋರಲಾಗುವುದು ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿತಾದರೂ, ಸಹೋದರರಿಬ್ಬರು ಲಭ್ಯರಾಗಲಿಲ್ಲ.

ಆರೋಪಗಳು– ಒತ್ತಾಯಗಳೇನು?

ಪ್ರತಿ ಷೇರಿನ ಬೆಲೆ ₹10ರಂತೆ ಸನ್ ಟಿವಿ ಪ್ರೈವೇಟ್ ಲಿಮಿಟೆಡ್ನ 12 ಲಕ್ಷ ಷೇರುಗಳನ್ನು ಕಲಾನಿಧಿ ತಮಗೇ ಹಂಚಿಕೆ ಮಾಡಿಕೊಂಡಿದ್ದಾರೆ. ಈ ರೀತಿ ಹಂಚಿಕೆ ಮಾಡುವುದಕ್ಕೆ ಎಲ್ಲ ಷೇರುದಾರರ ಅನುಮೋದನೆ ಪಡೆದಿಲ್ಲ.

2003ರ ಸೆಪ್ಟೆಂಬರ್ 15ರಂದು ಇದ್ದಂತೆ ಎಲ್ಲ ಷೇರುಗಳ ಹಂಚಿಕೆಯನ್ನು ಮರುಸ್ಥಾಪನೆ ಮಾಡಬೇಕು

ನಮ್ಮ ತಂದೆ ಹಾಗೂ ಕೇಂದ್ರದ ಮಾಜಿ ಸಚಿವ ಮುರಸೋಳಿ ಮಾರನ್ ಅವರಿಗೆ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅವರನ್ನು 2003ರ ಸೆಪ್ಟೆಂಬರ್ನಲ್ಲಿ ಚೆನ್ನೈಗೆ ವಾಪಸು ಕರೆದುಕೊಂಡು ಬರಲಾಯಿತು. ಇದಾದ ಕೆಲ ದಿನಗಳ ನಂತರ ಕಲಾನಿಧಿ ಹಾಗೂ ಅವರ ಪತ್ನಿ ಕಾವೇರಿ ‘ಮೊದಲ ಕಾನೂನುಬಾಹಿರ ಚಟುವಟಿಕೆ’ ಆರಂಭಿಸಿದರು

ಕಲಾನಿಧಿ ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ವಂಚನೆಯಲ್ಲಿ ತೊಡಗಿದ್ದಾರೆ. ಕ್ರಿಮಿನಲ್ ಪಿತೂರಿ ಹಾಗೂ ಫೋರ್ಜರಿಯನ್ನೂ ಮಾಡಿದ್ದಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳ ಕುರಿತು ತಕ್ಷಣವೇ ತನಿಖೆ ನಡೆಸಬೇಕು ಹಾಗೂ ಕಾನೂನು ಕ್ರಮ ತೆಗೆದುಕೊಳ್ಳಬೇಕು

ಸನ್ ಟಿವಿ ಗ್ರೂಪ್

1993ರ ಏಪ್ರಿಲ್ನಲ್ಲಿ ಸನ್ ಟಿವಿ ಗ್ರೂಪ್ ತನ್ನ ಕಾರ್ಯಾಚರಣೆ ಆರಂಭಿಸಿತು. ಡಿಎಂಕೆ ಕೇಂದ್ರ ಕಚೇರಿ ‘ಅಣ್ಣಾ ಅರಿವಾಲಯಂ’ನಿಂದ ಕಾರ್ಯಾಚರಣೆ ನಡೆಸುತ್ತಿರುವ ಈ ಗ್ರೂಪ್ 7 ಭಾಷೆಗಳಲ್ಲಿ ಒಟ್ಟು 37 ಟಿ.ವಿ ಚಾನೆಲ್ಗಳು ಹಾಗೂ ಡಿಟಿಎಚ್ ಸೇವೆಯನ್ನೂ ಹೊಂದಿದೆ. 69 ಎಫ್ಎಂ ರೇಡಿಯೊ ಕೇಂದ್ರಗಳು ಮೂರು ದಿನಪತ್ರಿಕೆಗಳು 6 ನಿಯತಕಾಲಿಕೆಗಳು ಹಾಗೂ ಎರಡು ಕ್ರೀಡಾ ಫ್ರಾಂಚೈಸಿಗಳನ್ನು ಸಹ ಗ್ರೂಪ್ ಹೊಂದಿದೆ.

ಆರೋಪ ತಳ್ಳಿಹಾಕಿದ ಸನ್ ಟಿವಿ: ತನಿಖೆಗೆ ಬಿಜೆಪಿ ಆಗ್ರಹ

ಕಂಪನಿಯ ಮುಖ್ಯಸ್ಥ ಕಲಾನಿಧಿ ಮಾರನ್ ವಿರುದ್ಧ ಅವರ ತಮ್ಮ ದಯಾನಿಧಿ ಮಾಡಿರುವ ಆರೋಪಗಳನ್ನು ಸನ್ ಟಿವಿ ಗ್ರೂಪ್ ತಳ್ಳಿಹಾಕಿದೆ. ‘ದಯಾನಿಧಿ ಅವರು ನೀಡಿರುವ ಈ ನೋಟಿಸ್ 22 ವರ್ಷಗಳ ಹಿಂದಿನದು. ಆಗ ಸಂಸ್ಥೆಯು ‘ಪ್ರೈವೇಟ್ ಲಿಮಿಟೆಡ್ ಕಂಪನಿ’ಯಾಗಿ ಕಾರ್ಯನಿರ್ವಹಿಸುತ್ತಿತ್ತು’ ಎಂದು ರಾಷ್ಟ್ರೀಯ ಷೇರು ಪೇಟೆಗೆ (ಎನ್ಎಸ್ಇ) ಬರೆದಿರುವ ಪತ್ರದಲ್ಲಿ ಸನ್ ಟಿವಿ ಹೇಳಿದೆ. ‘ಸಹೋದರರ ನಡುವಿನ ಈ ವಿವಾದ ಸಂಪೂರ್ಣ ವೈಯಕ್ತಿಕವಾದದ್ದು’ ಎಂದೂ ಕಂಪನಿ ಹೇಳಿದೆ.

ಆಗ್ರಹ: ದಯಾನಿಧಿ ಮಾರನ್ ತಮ್ಮ ಅಣ್ಣನ ವಿರುದ್ಧ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಆರೋಪಗಳ ಕುರಿತು ಕ್ರಿಮಿನಲ್ ತನಿಖೆ ಅಗತ್ಯ ಇದೆ. ಕೂಡಲೇ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಆಗ್ರಹಿಸಿದ್ದಾರೆ.

ಸನ್ ಟಿವಿ ಷೇರುಗಳು ಶೇ 5ರಷ್ಟು ಕುಸಿತ

ನವದೆಹಲಿ: ಸೋದರರಾದ ದಯಾನಿಧಿ ಹಗೂ ಕಲಾನಿಧಿ ಮಾರನ್ ನಡುವಿನ ಜಟಾಪಟಿಯಿಂದಾಗಿ ಸನ್ ಟಿವಿ ನೆಟ್ವರ್ಕ್ನ ಷೇರುಗಳು ಇಂಟ್ರಾ ಡೇ ವಹಿವಾಟಿನಲ್ಲಿ ಶುಕ್ರವಾರ ಶೇ 5ರಷ್ಟು ಕುಸಿತ ಕಂಡಿದೆ.

ಮುರುಸೋಳಿ ಮಾರನ್ ಅವರು 2003ರಲ್ಲಿ ನಿಧನದ ನಂತರ ಕಂಪನಿಯಲ್ಲಿ ವಂಚನೆ ಹಾಗೂ ದುರಾಡಳಿತದ ಆರೋಪದಡಿ ದಯಾನಿಧಿ ಮಾರನ್ ಅವರು ತಮ್ಮ ಸೋದರ ಹಾಗೂ ಇತರರಿಗೆ ನೋಟಿಸ್ ಕಳುಹಿಸಿ ಕಾನೂನು ಸಂಘರ್ಷ ಆರಂಭಿಸಿದ್ದಾರೆ.

ಬಿಎಸ್ಇಯಲ್ಲಿ ಸನ್ ಟಿವಿ ಷೇರು ಮೌಲ್ಯವು ಶೇ 5.20 (₹ 581.55)ರಷ್ಟು ಕುಸಿದಿದೆ. ದಿನದ ಅಂತ್ಯದಲ್ಲಿ ₹ 606.80ಕ್ಕೆ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.