ಲಖನೌ/ನೋಯ್ಡಾ: ನೋಯ್ಡಾದ ಸೂಪರ್‌ಟೆಕ್ ಅಕ್ರಮ ಅವಳಿ ಕಟ್ಟಡ ಪ್ರಕರಣದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಸೂಚಿಸಿದ್ದಾರೆ.

‘ಈ ಪ್ರಕರಣದ ಬಗ್ಗೆ ಲಖನೌನಲ್ಲಿ ಪರಿಶೀಲನೆ ನಡೆಸಿದ ಅವರು ತಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ’ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಕಟ್ಟಡಗಳಿಗೆ ಸಂಬಂಧಿಸಿದ ಬೈ–ಲಾಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ನೋಯ್ಡಾ ಸೆಕ್ಟರ್ 93ರಲ್ಲಿ ಸೂಪರ್‌ಟೆಕ್ ಲಿಮಿಟೆಡ್ ನಿರ್ಮಿಸಿರುವ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.