ನವದೆಹಲಿ: ವೈವಾಹಿಕ ವಿವಾದಗಳಲ್ಲಿ ಪರಿತ್ಯಕ್ತ ಪತಿಯ ನಿವ್ವಳ ತೆರಿಗೆ ವಿಧಿಸಬಹುದಾದ ಆದಾಯ/ ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು ಜೀವನಾಂಶ ಪಡೆಯುವುದಕ್ಕಾಗಿ ರಣಕ್ಕಾಗಿ ಪತ್ನಿಗೆ ಬಹಿರಂಗಪಡಿಸುವಂತೆ, ಆದಾಯ ತೆರಿಗೆ ಇಲಾಖೆಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನಿರ್ದೇಶನ ನೀಡಿದೆ.

‘ಇಂಥ ಪ್ರಕರಣಗಳಲ್ಲಿ ಖಾಸಗಿತನದ ಆಧಾರದ ಮೇಲೆ ಈ ರೀತಿಯ ಮಾಹಿತಿಯನ್ನು ನಿರಾಕರಿಸುವಂತಿಲ್ಲ’ ಎಂದು ಸಿಐಸಿ ಸೂಚಿಸಿದೆ.

ಕೇಂದ್ರ ಮಾಹಿತಿ ಆಯುಕ್ತ ವಿನೋದ್ ಕುಮಾರ್ ತಿವಾರಿ ಅವರು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ‘ವೈವಾಹಿಕ ಸ್ಥಿತಿ ಅಥವಾ ವೈವಾಹಿಕ ಬಾಕಿ ಜೀವನಾಂಶ ಅಥವಾ ಜೀವನ ನಿರ್ವಹಣೆ ಪ್ರಕರಣಗಳಲ್ಲಿ, ಪ್ರತಿವಾದಿಯು( ಆದಾಯ ತೆರಿಗೆ ಇಲಾಖೆ) ಅರ್ಜಿದಾರರು ಕೇಳಿದ ಮಾಹಿತಿಯನ್ನು ನೀಡಬೇಕು. ಹಾಗೆಯೇ, ತೆರಿಗೆ ಪಾವತಿ ಪ್ರತಿ ಅಥವಾ ವಿವರಗಳು ಮತ್ತು ಇತರೆ ವೈಯಕ್ತಿಕ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

‘ಜೀವಾನಂಶ ನೀಡುವುದನ್ನು ತಪ್ಪಿಸಿಕೊಳ್ಳಲು ಪತಿ ತನ್ನ ನಿಜವಾದ ಗಳಿಕೆಯನ್ನು ಮರೆಮಾಚುತ್ತಿದ್ದಾರೆ’ ಎಂದು ಆರೋಪಿಸಿದ ಮಹಿಳೆಯೊಬ್ಬರು, ಪತಿಯ ಐದು ವರ್ಷಗಳ ಆದಾಯದ ವಿವರಗಳನ್ನು ನೀಡುವಂತೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಇಲಾಖೆಯು ಆರ್ಟಿಐ ಕಾಯ್ದೆಯ ಸೆಕ್ಷನ್ 8(1)(ಜೆ) ಅಡಿಯಲ್ಲಿ ಮೂರನೇ ವ್ಯಕ್ತಿಗೆ ವ್ಯಕ್ತಿಯ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಆರ್ಟಿಐ ಮನವಿಯನ್ನು ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.