ನ್ಯೂಯಾರ್ಕ್/ವಾಷಿಂಗ್ಟನ್: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಹೇರಿರುವ ಶೇ 25ರಷ್ಟು ಹೆಚ್ಚುವರಿ ಸುಂಕವು ನ್ಯಾಯಸಮ್ಮತವಾಗಿದ್ದು, ಇದು ದೇಶದ ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ’ ಎಂದು ವೈಟ್ಹೌಸ್ನ ವ್ಯಾಪಾರ ಸಲಹೆಗಾರ ಪೀಟರ್ ನವ್ರೊ ಸಮರ್ಥಿಸಿಕೊಂಡಿದ್ದಾರೆ.

ಭಾರತದಿಂದ ಅಮೆರಿಕಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳುವವರು ಶೇ 25ರಷ್ಟು ಪ್ರತಿ ಸುಂಕ ಮತ್ತು ಶೇ 25ರಷ್ಟು ಹೆಚ್ಚುವರಿ ಸುಂಕ ಸೇರಿ ಸದ್ಯ ಶೇ 50ರಷ್ಟು ಸುಂಕ ಪಾವತಿಸಬೇಕಿದೆ. ಇದು ಅಮೆರಿಕವು ಇತರೆ ದೇಶಗಳ ಮೇಲೆ ಹೇರಿರುವ ಸುಂಕದಲ್ಲೇ ಗರಿಷ್ಠ ಮಟ್ಟದ್ದಾಗಿದೆ. ಹೆಚ್ಚುವರಿ ಸುಂಕವು ಆಗಸ್ಟ್ 27ರಿಂದ ಜಾರಿಗೆ ಬರಲಿದೆ.

‘ಪ್ರತಿ ಸುಂಕಕ್ಕೂ, ಹೆಚ್ಚುವರಿ ಸುಂಕಕ್ಕೂ ವ್ಯತ್ಯಾಸವಿದೆ. ಭಾರತದ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿರುವುದಕ್ಕೆ ಸಕಾರಣವಿದೆ. ರಷ್ಯಾದಿಂದ ತೈಲ ಖರೀದಿಸಬಾರದು ಎಂಬ ಅಮೆರಿಕದ ಎಚ್ಚರಿಕೆಯನ್ನು ಭಾರತ ತಿರಸ್ಕರಿಸಿದೆ. ಹೀಗಾಗಿ ಇದು ಸಂಪೂರ್ಣವಾಗಿ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತವನ್ನು ‘ತೆರಿಗೆಯ ಮಹಾರಾಜ’ ಎಂದು ಕರೆದಿರುವ ನವ್ರೊ, ‘ಇತರೆ ದೇಶಗಳಿಗೆ ಹೋಲಿಸಿದರೆ ಭಾರತವು ಅಮೆರಿಕದ ಸರಕುಗಳಿಗೆ ಗರಿಷ್ಠ ಮಟ್ಟದ ಸುಂಕ ವಿಧಿಸುತ್ತಿದೆ. ಅಮೆರಿಕವು ಭಾರತದ ಸರಕುಗಳಿಗಾಗಿ ಲಕ್ಷಾಂತರ ಡಾಲರ್ ಮೊತ್ತವನ್ನು ವ್ಯಯಿಸುತ್ತಿದೆ. ಭಾರತವು ಇದೇ ಅಮೆರಿಕದ ಡಾಲರ್ ಬಳಸಿಕೊಂಡು ರಷ್ಯಾದಿಂದ ತೈಲ ಖರೀದಿಸುತ್ತದೆ. ನಮ್ಮ ಅಧ್ಯಕ್ಷರಿಗೆ ಆರ್ಥಿಕ ಭದ್ರತೆ ಮತ್ತು ರಾಷ್ಟ್ರೀಯ ಭದ್ರತೆ ನಡುವಿನ ಸಂಬಂಧ ಚೆನ್ನಾಗಿ ತಿಳಿದಿದೆ. ಹೀಗಾಗಿ ಅವರು ಕಾದು ನೋಡೋಣ ಎಂದು ಹೇಳಿದ್ದಾರೆ’ ಎಂದರು.

ಭಾರತಕ್ಕಿಂತಲೂ ಚೀನಾ ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸುತ್ತದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ನವ್ರೊ, ಅಮೆರಿಕ ಚೀನಾ ಮೇಲೆ ಈಗಾಗಲೇ ಶೇ50ಕ್ಕಿಂತ ಹೆಚ್ಚಿನ ಸುಂಕ ವಿಧಿಸಿದೆ. ತೈಲ ಖರೀದಿ ವಿಚಾರವಾಗಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.

‘ಪ್ರತಿಕೂಲ ಪರಿಣಾಮ’

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ‘ಸುಂಕ ತಂತ್ರ’ವು ಭಾರತ–ಅಮೆರಿಕ ನಡುವೆ ದೀರ್ಘ ಕಾಲದಿಂದ ಬೆಳೆದು ಬಂದಿರುವ ಸಧೃಢ ವ್ಯಾಪಾರ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಮೆರಿಕ ಸಂಸದ ಗ್ರೆಗೊರಿ ಮೀಕ್ಸ್ ಹೇಳಿದ್ದಾರೆ. ‘ಅಮೆರಿಕವು ಭಾರತದೊಂದಿಗೆ ಸುಸ್ಥಿರ ವ್ಯಾಪಾರ ಸಂಬಂಧ ಮಾತ್ರವಲ್ಲ ಅಲ್ಲಿನ ಜನರೊಂದಿಗೂ ಗಾಢವಾದ ಬಾಂಧ್ಯವ ಹೊಂದಿದೆ. ಹಾಗಾಗಿ ಸುಂಕದ ವಿಚಾರವನ್ನು ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಗೌರವದಿಂದ ಬಗೆಹರಿಸಿಕೊಳ್ಳಬೇಕು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.