ಹೈದರಾಬಾದ್: 2013ರಲ್ಲಿ ನಡೆದಿದ್ದ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದ ಐವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ ವಿಚಾರಾಣಾ ನ್ಯಾಯಾಲಯದ ತೀರ್ಪನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.

ಎನ್ಐಎ (ವಿಚಾರಣಾ) ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಆದೇಶ ಕೋರಿ ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ನ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಕೆ.ಲಕ್ಷ್ಮಣ್, ನ್ಯಾಯಮೂರ್ತಿ ಪಿ.ಶ್ರೀ ಸುಧಾ ಅವರ ಪೀಠವು ಆ ಅರ್ಜಿಯನ್ನು ತಿರಸ್ಕರಿಸಿದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅಪರಾಧಿಗಳ ಪರ ವಕೀಲರು ತಿಳಿಸಿದ್ದಾರೆ. 2013ರ ಫೆ.21ರಂದು ಹೈದರಾಬಾದ್ನ ದಿಲ್ಸುಖ್ನಗರದಲ್ಲಿ ಎರಡು ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 18 ಮಂದಿ ಮೃತಪಟ್ಟು, 131 ಮಂದಿ ಗಾಯಗೊಂಡಿದ್ದರು.

ಪ್ರಕರಣ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಿದ್ದ ಎನ್ಐಎ, ಅಪರಾಧಿಗಳ ವಿರುದ್ಧ 4000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿತ್ತು. 2016ರ ಡಿ.13ರಂದು ಅಪರಾಧಿಗಳಿಗೆ ಮರಣದಂಡನೆ ಘೋಷಿಸಲಾಗಿತ್ತು.

2013ರ ಫೆ.21ರಂದು ಹೈದರಾಬಾದ್ನ ದಿಲ್ಸುಖ್ನಗರದಲ್ಲಿ ಎರಡು ಬಾಂಬ್ ಸ್ಫೋಟ ಘಟನೆಯಲ್ಲಿ 18 ಮಂದಿ ಸಾವು, 131 ಮಂದಿಗೆ ಗಾಯ 5 ಮಂದಿಯನ್ನು ಬಂಧಿಸಿದ್ದ ಎನ್ಐಎ, ಅಪರಾಧಿಗಳ ವಿರುದ್ಧ 4000 ಪುಟಗಳ ಚಾರ್ಜ್ಶೀಟ್ 2016ರ ಡಿ.13ರಂದು ಅಪರಾಧಿಗಳಿಗೆ ಮರಣದಂಡನೆ ಘೋಷಿಸಿದ್ದ ಕೋರ್ಟ್

ಏನಿದು ಪ್ರಕರಣ?

2013ರ ಫೆ.21ರಂದು ಹೈದರಾಬಾದ್ನ ದಿಲ್ಸುಖ್ನಗರದಲ್ಲಿ ಎರಡು ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 18 ಮಂದಿ ಮೃತಪಟ್ಟು 131 ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಿದ್ದ ಎನ್ಐಎ ಅಪರಾಧಿಗಳ ವಿರುದ್ಧ 4000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿತ್ತು. 2016ರ ಡಿ.13ರಂದು ಅಪರಾಧಿಗಳಿಗೆ ಮರಣದಂಡನೆ ಘೋಷಿಸಲಾಗಿತ್ತು. ಎನ್ಐಎ (ವಿಚಾರಣಾ) ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಆದೇಶ ಕೋರಿ ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ನ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.