ಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅಜ್ಜನ ಮೃತದೇಹವನ್ನು ಮೊಮ್ಮಗ ಫ್ರಿಡ್ಜ್‌ನಲ್ಲಿರಿಸಿದ ಘಟನೆ ವರದಿಯಾಗಿದೆ.

ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಕುಲ್ಗಾಂ ಎನ್ಕೌಂಟರ್: ಓರ್ವ ಉಗ್ರ ಸಾವು, ಇಬ್ಬರು ಯೋಧರಿಗೆ ಗಾಯ

ನಿವೃತ್ತ ಮುಖ್ಯೋಪಾಧ್ಯಾಯರಾದ ವೃದ್ಧನಿಗೆ 92ರಿಂದ 95 ವರ್ಷ ವಯಸ್ಸು ಅಂದಾಜಿಸಲಾಗಿದೆ. ಪಿಂಚಣಿಯಿಂದ ಸಿಗುವ ಹಣದಿಂದ ಮೊಮ್ಮಗನ ಜೊತೆಗಿದ್ದರು. ಅವರ ಕುಟಂಬ ಸದಸ್ಯರೆಲ್ಲ ಕಾಮರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಾರೆ.

ಗುರುವಾರದಂದು ನೆರೆಮನೆಯಿಂದ ದುರ್ವಾಸನೆ ಹೊರಹೊಮ್ಮುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಬಂದು ಶೋಧ ನಡೆಸಿದಾಗ ಫ್ರಿಡ್ಜ್‌ನಲ್ಲಿ ಮೃತದೇಹ ಪತ್ತೆಯಾಗಿದೆ.

'ಇತ್ತೀಚಿಗೆ ಅನಾರೋಗ್ಯಕ್ಕೊಳಗಾಗಿದ್ದ ಅಜ್ಜ ಹಾಸಿಗೆ ಹಿಡಿದಿದ್ದರು. ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಇರಿಸಿದ್ದೆ' ಎಂದು ಮೊಮ್ಮಗ ತಪ್ಪೊಪ್ಪಿಕೊಂಡಿದ್ದಾನೆ.

ಮಾಸಿಕ ಪಿಂಚಣಿ ನಿಲ್ಲಬಾರದೆಂಬ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದಾನೆಯೇ ಅಥವಾ ಘಟನೆಯಲ್ಲಿ ಇನ್ಯಾವುದೇ ದುರುದ್ದೇಶ ಅಡಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.