ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದಲ್ಲೇ ತೆಲಂಗಾಣದ ಸಾಧನೆ ಅತ್ಯುನ್ನತ: ರಾಜ್ಯಪಾಲೆ ತಮಿಳಿಸೈ

Last Updated 3 ಫೆಬ್ರುವರಿ 2023, 14:48 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ಆರ್ಥಿಕವಾಗಿ ಬಲವಾಗಿರುವುದು ಮಾತ್ರವಲ್ಲದೆ ಕಲ್ಯಾಣ ಮತ್ತು ಅಭಿವೃದ್ಧಿಗಳಲ್ಲೂ ಕೂಡ ದೇಶದಲ್ಲೇ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜ್ಯವಾಗಿದೆ. ಎಂದು ರಾಜ್ಯಪಾಲ ತಮಿಳಿಸೈ ಸೌಂದರರಾಜನ್‌ ಶುಕ್ರವಾರ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ತೆಲಂಗಾಣದ ಸಮಗ್ರ ಬೆಳವಣಿಗೆ ದೇಶಕ್ಕೆ ಮಾದರಿಯಾಗಿದೆ. ಜನರ ಆಶೀರ್ವಾದದಿಂದ ಉತ್ತಮ ರೀತಿಯಲ್ಲಿ ರಾಜ್ಯ ಬೆಳವಣಿಗೆಯತ್ತ ಸಾಗುತ್ತಿದೆ ಎಂದರು.

ಒಂದು ಕಾಲದಲ್ಲಿ ಕೃಷಿ ಕ್ಷೇತ್ರ ಸಂಪೂರ್ಣವಾಗಿ ಕುಗ್ಗಿತ್ತು, ಗ್ರಾಮಗಳಲ್ಲಿ ನೀರಿನ ಕೊರತೆಯಿಂದಾಗಿ ಬಡತನ ಚಿತ್ರಣವನ್ನು ಕಾಣಬಹುದಾಗಿತ್ತು. ಆದರೆ ಈಗ ಉಳಿದ ರಾಜ್ಯಗಳಿಗೂ ಉತ್ಪನ್ನಗಳನ್ನು ರಫ್ತು ಮಾಡುವಷ್ಟು ರಾಜ್ಯ ಅಭಿವೃದ್ಧಿಯಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆ ಮಾಡುವ ವಾತಾವರಣ ನಿರ್ಮಾಣವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT