ನವದೆಹಲಿ: ಜಮ್ಮು ಕಾಶ್ಮೀರದ ಸಂಸದ, ಸದ್ಯ ಜೈಲಿನಲ್ಲಿರುವ ಅಬ್ದುಲ್ ರಶೀದ್ ಶೇಖ್ ಅವರಿಗೆ ಸಂಸತ್ ಕಲಾಪದಲ್ಲಿ ಭಾಗಿಯಾಗಲು ದೆಹಲಿ ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಜೈಲಿನಿಂದ ಹೊರಗಿದ್ದಾಗ ರಶೀದ್ ಅವರು ಮೊಬೈಲ್ ಫೋನ್, ಸ್ಥಿರ ದೂರವಾಣಿ ಬಳಸುವಂತಿಲ್ಲ, ಮಾಧ್ಯಮಗಳ ಜೊತೆ ಮಾತನಾಡುವಂತಿಲ್ಲ ಎಂದು ಪೀಠ ಆದೇಶಿಸಿತು.

ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಅನೂಪ್ ಜೈರಾಮ್ ಭಂಭಾನಿ ಅವರಿದ್ದ ಪೀಠ, ‘ಮಾ. 26ರಿಂದ ಏ.4ರವರೆಗೆ ಸಂಸದ ರಶೀದ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರು ಪೊಲೀಸರ ವಶದಲ್ಲಿ ಇರುವಂತೆಯೇ ಕಲಾಪಕ್ಕೆ ತೆರಳಬಹುದು’ ಎಂದು ಸೂಚಿಸಿತು.

ಉಗ್ರ ಚಟುವಟಿಕೆಗಳಿಗೆ 2017ರಲ್ಲಿ ಆರ್ಥಿಕ ನೆರವನ್ನು ನೀಡಿದ್ದ ಆರೋಪದಡಿ ಬಂಧಿತರಾಗಿರುವ ರಶೀದ್ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ಈ ಮೊದಲು ಇವರಿಗೆ ಮಧ್ಯಂತರ ಜಾಮೀನು ನೀಡಲು ವಿಚಾರಾಣಾಧೀನ ನ್ಯಾಯಾಲಯ ಮಾರ್ಚ್ 10ರಂದು ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.