ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ, ಶೋಪಿಯಾನ್‌ನಲ್ಲಿ ಪ್ರತ್ಯೇಕ ಎನ್‌ಕೌಂಟರ್‌: ಏಳು ಉಗ್ರರ ಹತ್ಯೆ

ಪುಲ್ವಾಮಾ, ಶೋಪಿಯಾನ್‌ ಪಟ್ಟಣದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ
Last Updated 9 ಏಪ್ರಿಲ್ 2021, 9:20 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮ– ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶ ಹಾಗೂ ಶೋಪಿಯಾನ್ ಪಟ್ಟಣದಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಅನ್ಸಾರ್‌ ಘಜ್ವಾತ್‌–ಉಲ್‌ ಹಿಂದ್‌ ಭಯೋತ್ಪಾದಕ ಸಂಘಟನೆ ಮುಖಂಡ ಇಮ್ತಿಯಾಜ್ ಅಹ್ಮದ್‌ ಶಾ ಸೇರಿದಂತೆ ಏಳು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಶೋಪಿಯಾನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಐದು ಜನ ಉಗ್ರರನ್ನು ಕೊಲ್ಲಲಾಗಿದೆ. ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನೌಬಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಪಿಯಾನ್‌ನ ಮಸೀದಿಯೊಳಗೆ ಇಬ್ಬರು ಭಯೋತ್ಪಾದಕರು ಅಡಗಿ ಕುಳಿತಿರುವ ವಿಷಯ ಗೊತ್ತಾಯಿತು. ಪೊಲೀಸರು ಆತನನ್ನು ಹೊರತರುವ ಪ್ರಯತ್ನ ನಡೆಸಿದರು ಎಂದು ಮೂಲಗಳು ಹೇಳಿವೆ.

‘ಹೊರಗೆ ಬಂದು ಶರಣಾಗುವಂತೆ ಮಸೀದಿಯೊಳಗೆ ಅಡಗಿಕೊಂಡಿರುವ ಉಗ್ರನ ಮನವೊಲಿಸಲು ಆತನ ಸಹೋದರ ಮತ್ತು ಸ್ಥಳೀಯ ನಿವಾಸಿ ಇಮಾಮ್‌ಸಾಹೇಬ್‌ ಎಂಬುವವರನ್ನು ಮಸೀದಿ ಒಳಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT