ವಿರೋಧ ಪಕ್ಷಗಳ ಸದಸ್ಯರು ನೀಡಿದ್ದ ಭಿನ್ನ ಅಭಿಪ್ರಾಯಗಳಿಗೆ ವರದಿಯಲ್ಲಿ ಕತ್ತರಿ ಹಾಕಲಾಗಿದೆ. ಬಹುಮತ ಇರುವ ಪಕ್ಷದ ಸದಸ್ಯರ ಅಭಿಪ್ರಾಯವನ್ನು ಮಾತ್ರ ಇರಿಸಿಕೊಳ್ಳುವುದು ಸರಿಯಲ್ಲ. ಇದು ಖಂಡನಾರ್ಹ ಇದು ಪ್ರಜಾತಂತ್ರ ವಿರೋಧಿ. ಇದು ನಕಲಿ ವರದಿ. ಈ ವರದಿಯನ್ನು ಸಮಿತಿಗೆ ವಾಪಸ್ ಕಳುಹಿಸಬೇಕು. ಇಲ್ಲಿ ಸದಸ್ಯರು ವೈಯಕ್ತಿಕ ಕಾರಣಗಳಿಗೆ ಪ್ರತಿಭಟನೆ ನಡೆಸುತ್ತಿಲ್ಲ. ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ
– ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ
ಸಮಿತಿಯ ಕುರಿತಾಗಿ ಆರೋಪಗಳನ್ನು ಹೊರಿಸುವಂತಹ ಕೆಲವು ಭಾಗಗಳನ್ನು ಮಾತ್ರ ತೆಗೆದುಹಾಕಲಾಗಿದೆ. ಸಮಿತಿಯ ಬಗ್ಗೆಯೇ ಆರೋಪ ಹೊರಿಸುವಂತಹ ಅಂಶಗಳು ಇದ್ದರೆ, ಅದು ಸರಿಯಲ್ಲ ಎಂದು ಅಧ್ಯಕ್ಷರಿಗೆ ಅನ್ನಿಸಿದರೆ, ಅಂತಹ ಅಂಶಗಳನ್ನು ತೆಗೆಯುವ ಅಧಿಕಾರವು ಅಧ್ಯಕ್ಷರಿಗೆ ಇದೆ. ಇದು ನಿಯಮಗಳಲ್ಲಿ ಉಲ್ಲೇಖವಾಗಿದೆ.