ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ನರ ಹತ್ಯೆಯೂ ಸಲ್ಲ, ಗೋ ಹತ್ಯೆಯೂ ಸಲ್ಲ: ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್ ಕುಮಾರ್

Published : 8 ಸೆಪ್ಟೆಂಬರ್ 2024, 10:48 IST
Last Updated : 8 ಸೆಪ್ಟೆಂಬರ್ 2024, 10:48 IST
ಫಾಲೋ ಮಾಡಿ
Comments

‌ಪಟ್ನಾ: ‘ನರ ಹತ್ಯೆಯೂ ಸಲ್ಲ, ಗೋ ಹತ್ಯೆಯೂ ಸಲ್ಲ. ವಿವಿಧ ಧರ್ಮಶ್ರದ್ಧೆಯ ಜನರು ಶಾಂತಿಯಿಂದ ಬಾಳುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಪಟ್ನಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯ ಪರವಾಗಿ ಮುಖ್ಯಸ್ಥ ಮೋಹನ್ ಭಾಗವತ್‌ ಅವರು ನೀಡಿದ ಹೇಳಿಕೆ ಪರವಾಗಿ ಆರ್‌ಎಸ್‌ಎಸ್‌ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

‘ಮೋಹನ್ ಭಾಗವತ್ ಅವರು ಹೇಳಿರುವುದು ಎಲ್ಲಾ ಆರ್‌ಎಸ್‌ಎಸ್‌ ಕಾರ್ಯಕರ್ತರ ನಿಲುವು. ಜಾತಿ ಎನ್ನುವುದು ವಾಸ್ತವ. ಅದನ್ನು ನಿರಾಕರಿಸಲಾಗದು. ಆದರೆ ನಾವು ಜಾತಿವಾದದ ವಿಷದಿಂದ ದೂರ ಇರಬೇಕು‘ ಎಂದು ನುಡಿದಿದ್ದಾರೆ.

‘ಹಲವು ಧರ್ಮಗಳು ಇವೆ. ವಿವಿಧ ಧರ್ಮಗಳು ಇರಬೇಕು ಎನ್ನುವುದೂ ನಮ್ಮ ನಿಲುವು. ಆದರೆ ಧಾರ್ಮಿಕ ಮತಾಂಧತೆ ಮತ್ತು ಅದು ನಡೆಸುವ ಹಿಂಸಾಚಾರದ ವಿರುದ್ಧ ನಾವು ಎಚ್ಚರದಿಂದಿರಬೇಕು. ಎಲ್ಲರನ್ನು ಗೌರವಿಸುವ ಮೂಲಕ ಜನರು ತಮ್ಮದೇ ಧರ್ಮವನ್ನು ಅನುಸರಿಸಬೇಕು’ ಎಂದು ಹೇಳಿದ್ದಾರೆ.

ಗೋ ರಕ್ಷಕರಿಂದ ಆಗುತ್ತಿರುವ ಹತ್ಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದ ಹಲವು ಭಾಗಗಳಲ್ಲಿ ಜನರು ಮಾಂಸವನ್ನು ಸೇವಿಸುತ್ತಾರೆ. ಆದರೆ ಗೋವುಗಳ ಬಗ್ಗೆ ಜನ ಸೂಕ್ಷ್ಮ ಭಾವನೆ ಹೊಂದಿದ್ದಾರೆ ಎನ್ನುವುದು ನಾವು ನೆನಪಿಸಿಕೊಳ್ಳಬೇಕು. ಮನುಷ್ಯ ಹತ್ಯೆಯೂ ಇಲ್ಲದ, ಗೋಹತ್ಯೆಯೂ ಇಲ್ಲದ ವಾತಾವರಣ ಸೃಷ್ಟಿ ಮಾಡಲು ನಾವು ಪ್ರಯತ್ನಿಸಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT