ನವದೆಹಲಿ: ತಿಹಾರ್ ಜೈಲಿನ ಅಧಿಕಾರಿ ದೀಪಕ್ ಶರ್ಮಾ ಅವರು ಪಾರ್ಟಿಯೊಂದರಲ್ಲಿ ಪಿಸ್ತೂಲ್ ಝಳಪಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
18 ಸೆಕೆಂಡ್ ವಿಡಿಯೊದಲ್ಲಿ, ಮಂಡೋಲಿ ಕಾರಾಗೃಹದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಶರ್ಮಾ ಅವರು ರಾಜಕೀಯ ನಾಯಕರೊಬ್ಬರು ಏರ್ಪಡಿಸಿದ್ದ ಪಾರ್ಟಿಯಲ್ಲಿ ಪಿಸ್ತೂಲ್ ಹಿಡಿದು ಡಾನ್ಸ್ ಮಾಡಿರುವ ದೃಶ್ಯವಿದೆ.
ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ದುರ್ವರ್ತನೆ ಕಾರಣದಿಂದ ಶರ್ಮಾ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಶರ್ಮಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ 4.4 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.