ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಡೈರಿ ಸಮಾವೇಶ: ತಿರುಪತಿ ಮೂಲದ ಶ್ರೀಜಾ ಮಹಿಳಾ ಸಂಘಕ್ಕೆ ಪ್ರಶಸ್ತಿ

Published 18 ಅಕ್ಟೋಬರ್ 2023, 10:34 IST
Last Updated 18 ಅಕ್ಟೋಬರ್ 2023, 10:34 IST
ಅಕ್ಷರ ಗಾತ್ರ

ನವದೆಹಲಿ: ರೈತ ಮಹಿಳೆಯರೇ ನಡೆಸುವ ತಿರುಪತಿ ಮೂಲದ ಶ್ರೀಜಾ ಹಾಲು ಉತ್ಪಾದಕರ ಕಂಪನಿಯು ಷಿಕಾಗೊದಲ್ಲಿ ನಡೆದ ಜಾಗತಿಕ ಡೈರಿ ಸಮಾವೇಶದಲ್ಲಿ ಮಹಿಳಾ ಸಬಲೀಕರಣ ವಿಭಾಗದಲ್ಲಿನ ವಿನೂತನ ಪ್ರಯತ್ನಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದೆ. 

ಭಾರತದಿಂದ ಈ ಪ್ರಶಸ್ತಿಗಾಗಿ ನಾಮನಿರ್ದೇಶಿತಗೊಂಡ ಮೂರು ಸಂಸ್ಥೆಗಳಲ್ಲಿ ಶ್ರೀಜಾ ಕೂಡಾ ಒಂದು. ಎನ್‌ಡಿಎಸ್‌ ನಡೆಸುವ ಉದಯಪುರದ ಆಶಾ ಹಾಲು ಉತ್ಪಾದಕರ ಕಂಪನಿ ಮತ್ತು ಗುಜರಾತ್‌ ಹಾಲು ಮತ್ತು ಮಾರುಕಟ್ಟೆ ಸಹಕಾರ ಒಕ್ಕೂಟದ ಹೆಸರು ಶಿಫಾರಸುಗೊಂಡಿತ್ತು.

ಶ್ರೀಜಾ ಹಾಲು ಒಕ್ಕೂಟವು ಆಂಧ್ರ ಪ್ರದೇಶದ 11 ಜಿಲ್ಲೆಗಳು, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನ್ನ ವಹಿವಾಟು ಹೊಂದಿದೆ. ಪ್ರತಿ ನಿತ್ಯ 5.5 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ವಾರ್ಷಿಕ ₹1 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ.

ಪ್ರಶಸ್ತಿ ಲಭಿಸಿದ್ದರ ಕುರಿತು ಪ್ರತಿಕ್ರಿಯಿಸಿರುವ ಶ್ರೀಜಾ ಡೈರಿಯ ಸಿಇಒ ಜಯತೀರ್ಥ ಛಾರಿ, ‘ಹೈನುಗಾರಿಕೆ ಅವಲಂಬಿಸಿರುವ ಮಹಿಳೆಯರೇ ನಡೆಸುತ್ತಿರುವ ನಮ್ಮ ಡೈರಿಗೆ ಪ್ರಶಸ್ತಿ ಲಭಿಸಿರುವುದು ನಮ್ಮ ಸಂಸ್ಥೆ ಮಾತ್ರವಲ್ಲ, ಇಡೀ ದೇಶದ ರೈತ ಮಹಿಳೆಯರಿಗೆ ಸಂದ ಗೌರವವಾಗಿದೆ’ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಪಶುಸಂಗೋಪನಾ ಹಾಗೂ ಡೈರಿ ಇಲಾಖೆಯ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT