ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 10 ಕಪ್ಪು ಹುಲಿಗಳು ಒಡಿಶಾದಲ್ಲಿ ಪತ್ತೆ!

Published 21 ಡಿಸೆಂಬರ್ 2023, 14:06 IST
Last Updated 21 ಡಿಸೆಂಬರ್ 2023, 14:06 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಸದ್ಯ 10 ಕಪ್ಪು ಹುಲಿಗಳು ಇವೆ. ಅವೆಲ್ಲವೂ ಒಡಿಶಾದ ಸಿಂಪ್ಲಿಪಾಲ್‌ನಲ್ಲಿಯೇ ಇವೆ ಎಂದು ಸರ್ಕಾರವು ಸಂಸತ್ತಿಗೆ ಗುರುವಾರ ತಿಳಿಸಿತು.

2022ರಲ್ಲಿ ದೇಶದಾದ್ಯಂತ ನಡೆಸಿದ್ದ ಹುಲಿ ಗಣತಿ ಪ್ರಕಾರ, ಸಿಂಪ್ಲಿಪಾಲ್‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 16 ಹುಲಿಗಳಿವೆ. ಅವುಗಳಲ್ಲಿ 10 ಹುಲಿಗಳು ಮೆಲಾನಿಸಮ್‌ (ಕಪ್ಪು ಪಟ್ಟಿಗಳು ಪ್ರಧಾನವಾಗಿ ಗೋಚರಿಸುವುದು) ಲಕ್ಷಣ ಹೊಂದಿವೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರು ರಾಜ್ಯಸಭೆಗೆ ತಿಳಿಸಿದರು.

ವಂಶವಾಹಿ ಸಂರಚನೆಯಲ್ಲಿಯ ವ್ಯತ್ಯಾಸದ ಕಾರಣದಿಂದಾಗಿ ಸಿಂಪ್ಲಿಪಾಲ್‌ನಲ್ಲಿರುವ ಹುಲಿಗಳು ಭಿನ್ನವಾದ ರೂಪ ಹೊಂದಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT