ವಾಷಿಂಗ್ಟನ್: ಜನವರಿ 6,2021ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಳಿ ಬಳಿಕ ನಿರ್ಬಂಧಿಸಲಾಗಿದ್ದ ಟ್ರಂಪ್ ಅವರ ಫೇಸ್‌ಬುಕ್ ಮತ್ತು ಯೂಟ್ಯೂಬ್ ಖಾತೆಗಳನ್ನು ಮರುಸ್ಥಾಪಿಸಲಾಗಿದೆ.

ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಟ್ರಂಪ್ ತಮ್ಮ ಬೆಂಬಲಿಗರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಫೇಸ್‌ಬುಕ್, ಯೂಟ್ಯೂಬ್ ಖಾತೆಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯಲಾಗಿತ್ತು.

ಶುಕ್ರವಾರ, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಮಾಡಿದ ಮೊದಲ ಪೋಸ್ಟ್‌ನಲ್ಲಿ ಟ್ರಂಪ್ ‘I'M BACK!’ ಎಂದು ಬರೆದುಕೊಂಡಿದ್ದಾರೆ.

2016ರಲ್ಲಿ ಟ್ರಂಪ್, ಹಿಲರಿ ಕ್ಲಿಂಟನ್ ವಿರುದ್ಧ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷರಾಗಿದ್ದ ವಿಡಿಯೊ ಪೋಸ್ಟ್ ಮಾಡಲಾಗಿದೆ. ಬಳಿಕ, ಟ್ರಂಪ್ 2024 ಎಂಬ ಸ್ಕ್ರೀನ್ ತೆರೆದುಕೊಳ್ಳುತ್ತದೆ. ನಿಮ್ಮನ್ನು ದೀರ್ಘ ಕಾಲ ಕಾಯಿಸಿದ್ದಕ್ಕಾಗಿ ಕ್ಷಮೆ ಇರಲಿ ಎಂದು ಟ್ರಂಪ್ ಹೇಳುತ್ತಾರೆ. ಈ ಬಾರಿ ಮಹಿಳಾ ಉಪಾಧ್ಯಕ್ಷೆಯನ್ನು ಆಯ್ಕೆ ಮಾಡುವ ಕುರಿತಂತೆಯೂ ಅವರು ಮಾತನಾಡಿದ್ದಾರೆ.

ಶುಕ್ರವಾರ ಟ್ರಂಪ್ ಅವರ ಯೂಟ್ಯೂಬ್ ಖಾತೆಯನ್ನು ಮರುಸ್ಥಾಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ಮೆಟಾ ಪುನಃಸ್ಥಾಪಿಸಿತ್ತು. ಇದೀಗ, ಫೇಸ್‌ಬುಕ್‌ನಲ್ಲಿ ಮೊದಲ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಉದ್ಯಮಿ ಎಲಾನ್ ಮಸ್ಕ್, ಟ್ವಿಟರ್ ಕಂಪನಿಯನ್ನು ಖರೀದಿಸಿದ ಬಳಿಕ ಟ್ರಂಪ್ ಅವರ ಟ್ವಿಟರ್ ಖಾತೆ ಮೇಲಿನ ನಿರ್ಬಂಧ ತೆರವು ಮಾಡಲಾಗಿತ್ತು. ಆದರೆ, ಈವರೆಗೆ ಟ್ರಂಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಪೋಸ್ಟ್ ಮಾಡಿಲ್ಲ.

2016ರ ಚುನಾವಣೆಯಲ್ಲಿ ಟ್ರಂಪ್ ಅವರ ಪ್ರಚಾರದಲ್ಲಿ ಸಾಮಾಜಿಕ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಿದ್ದವು. ಈಗ ಅವರ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗೆಳು ಹಳಿಗೆ ಮರಳಿದ್ದು, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರಿಗೆ ಬಲ ತುಂಬಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.