ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ಹುಂಡಿಯಲ್ಲಿ ₹40 ಕೋಟಿ ಕಾಣಿಕೆ

Published 2 ಜನವರಿ 2024, 23:03 IST
Last Updated 2 ಜನವರಿ 2024, 23:03 IST
ಅಕ್ಷರ ಗಾತ್ರ

ತಿರುಪತಿ: ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠದ್ವಾರ ದರ್ಶನದ ಸಂದರ್ಭ (2023ರ ಡಿಸೆಂಬರ್‌ 23ರಿಂದ ಈ ವರ್ಷದ ಜನವರಿಗೆ 1ರವರೆಗೆ) ಬರೀ ಹತ್ತು ದಿನಗಳಲ್ಲಿ ಭಕ್ತರಿಂದ ದೇವರ ಹುಂಡಿಗೆ ₹40 ಕೋಟಿ ಹಣ ಕಾಣಿಕೆಯಾಗಿ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಟಿಡಿಯು 36 ಲಕ್ಷ ಲಡ್ಡುಗಳನ್ನು ಮಾರಾಟ ಮಾಡಿದೆ. 2 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಅರ್ಪಿಸಿದ್ದಾರೆ. ದಾಖಲೆಯ ಸಂಖ್ಯೆಯಲ್ಲಿ 6.47 ಲಕ್ಷ ಭಕ್ತರು ವೈಕುಂಠದ್ವಾರ ದರ್ಶನ ಪಡೆದರು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT