ರಾಯಪುರ: ಛತ್ತೀಸಗಢದ ಬಸ್ತರ್ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.

ಮೃತ ನಕ್ಸಲರನ್ನು ಹಲ್ದಾರ್ ಮತ್ತು ರಾಮೆ ಎಂದು ಗುರುತಿಸಲಾಗಿದೆ. ಇವರ ಸುಳಿವು ನೀಡಿದವರಿಗೆ ಕ್ರಮವಾಗಿ ₹8 ಲಕ್ಷ ಮತ್ತು ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಭದ್ರತಾ ಪಡೆಯ ಜಂಟಿ ತಂಡವು ಮಂಗಳವಾರ ಸಂಜೆ ಕಿಲಂ–ಬರಗುಂ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಎನ್ಕೌಂಟರ್ ನಡೆದಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸುಂದರ್ರಾಜ್ ಪಿ. ತಿಳಿಸಿದರು.

ನಕ್ಸಲರ ಮೃತದೇಹಗಳ ಜೊತೆಗೆ ಸ್ಥಳದಲ್ಲಿದ್ದ ಎಕೆ–47 ರೈಫಲ್ ಮತ್ತಿತರ ಶಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.