ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆ ನೌಕರರು ಎಂದು ಹೇಳಿಕೊಂಡ ಇಬ್ಬರಿಂದ ವ್ಯಾಪಾರಿ ಮಗನ ಅಪಹರಣ

Last Updated 25 ಜುಲೈ 2020, 3:30 IST
ಅಕ್ಷರ ಗಾತ್ರ

ಲಖನೌ:'ನಾವು ಆರೋಗ್ಯ ಇಲಾಖೆ ನೌಕರರು. ಕೊರೊನಾ ಪಿಡುಗು ತಡೆಗಟ್ಟಲು ಮನೆಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುತ್ತಿದ್ದೇವೆ' ಎಂದು ಹೇಳಿಕೊಂಡ ಇಬ್ಬರು ದುಷ್ಕರ್ಮಿಗಳು ವ್ಯಾಪಾರಿಯೊಬ್ಬರ 8 ವರ್ಷದ ಮಗನನ್ನು ಅಪಹರಿಸಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ.

ಆರೋಗ್ಯ ಇಲಾಖೆ ನೌಕರರು ಎಂದು ಹೇಳಿಕೊಂಡ ಇಬ್ಬರು ಮನೆಯೊಳಗೆ ಪ್ರವೇಶಿಸಿ, ಒಂದಿಷ್ಟು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳನ್ನು ಕೊಟ್ಟರು.ಇನ್ನಷ್ಟು ಮಾಸ್ಕ್‌ಗಳು ಮತ್ತು ಸ್ಯಾನಿಟೈಸರ್‌ಗಳು ಬೇಕಿದ್ದರೆ ನಮ್ಮ ವಾಹನದ ಬಳಿಗೆ ಬರಬೇಕು ಎಂದು ಹೇಳಿದರು.

ಅವರ ಮಾತು ನಂಬಿದ ಕುಟುಂಬದ ಸದಸ್ಯರು ಬಾಲಕನನ್ನು ಅವರೊಂದಿಗೆ ಕಳುಹಿಸಿದರು. ಅದರೆ ಗಂಟೆ ಕಳೆದರೂ ಹುಡುಗ ಮನೆಗೆ ಬರಲಿಲ್ಲ. ಬದಲಿಗೆ ಒತ್ತೆ ಹಣಕ್ಕಾಗಿ ಬೆದರಿಕೆ ಕರೆ ಬಂತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

'ಅಪಹರಣಕಾರರನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಪಡೆಯು ಕಾರ್ಯಪ್ರವೃತ್ತವಾಗಿದೆ' ಎಂದು ಉತ್ತರ ಪ್ರದೇಶದ ಡಿಜಿಪಿ ಎಚ್‌.ಸಿ.ಅವಸ್ತಿ ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT