ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಈ ವಿಶ್ವವಿದ್ಯಾಲಯ ನಕಲಿ ಎಂದು ಯುಜಿಸಿ ಘೋಷಣೆ

ಪದವಿ ಪ್ರಮಾಣಪತ್ರ ನೀಡುವ ಅಧಿಕಾರವಿಲ್ಲ; ಮಾನ್ಯತೆಯೂ ಇಲ್ಲ
Published 2 ಆಗಸ್ಟ್ 2023, 15:35 IST
Last Updated 2 ಆಗಸ್ಟ್ 2023, 15:35 IST
ಅಕ್ಷರ ಗಾತ್ರ

ನವದೆಹಲಿ: 20 ವಿಶ್ವವಿದ್ಯಾಲಯಗಳು ನಕಲಿ. ಇವುಗಳಿಗೆ ಯಾವುದೇ ಪದವಿ ಪ್ರಮಾಣಪತ್ರ ವಿತರಿಸುವ ಅಧಿಕಾರವಿಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಬುಧವಾರ ಪ್ರಕಟಿಸಿದೆ. ದೆಹಲಿಯಲ್ಲೇ ಇವುಗಳ ಸಂಖ್ಯೆ ಹೆಚ್ಚಿದೆ.

‘ಯುಜಿಸಿ ಕಾಯ್ದೆಯ ನಿಯಮಾವಳಿಗೆ ವಿರುದ್ಧವಾಗಿ ಈ ವಿಶ್ವವಿದ್ಯಾಲಯಗಳು ಪದವಿ ಪ್ರಮಾಣಪತ್ರ ವಿತರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಮಾಣಪತ್ರಗಳು ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೂ ಮಾನ್ಯತೆ ಹೊಂದಿಲ್ಲ’ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್‌ ಜೋಶಿ ತಿಳಿಸಿದ್ದಾರೆ.

ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ನವದೆಹಲಿಯಲ್ಲಿರುವ ಆಲ್‌ ಇಂಡಿಯಾ ಇನ್ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಂಡ್‌ ಫಿಜಿಕಲ್‌ ಹೆಲ್ತ್‌ ಸೈನ್ಸ್‌ಸ್‌, ಕಮರ್ಷಿಯಲ್‌ ಯುನಿವರ್ಸಿಟಿ ಲಿಮಿಟೆಡ್‌–ದರಿಯಾಗಂಜ್, ಯುನೈಟೆಡ್‌ ನೇಶನ್ಸ್‌ ಯುನಿವರ್ಸಿಟಿ, ವೃತ್ತಿಪರ ವಿಶ್ವವಿದ್ಯಾಲಯ, ಎಡಿಆರ್‌–ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ, ಇಂಡಿಯನ್‌ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್, ವಿಶ್ವಕರ್ಮ ಒಪನ್ ಯುನಿವರ್ಸಿಟಿ ಫಾರ್ ಸೆಲ್ಫ್‌ ಎಂಪ್ಲಾಯ್‌ಮೆಂಟ್‌, ಆಧ್ಯಾತ್ಮಿಕ ವಿಶ್ವವಿದ್ಯಾಲಯ ಈ ಪಟ್ಟಿಯಲ್ಲಿವೆ.

ಉತ್ತರಪ್ರದೇಶದಲ್ಲಿನ ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯುನಿವರ್ಸಿಟಿ ಆಫ್‌ ಎಲೆಕ್ಟ್ರೋ ಕಾಂಪ್ಲೆಕ್ಸ್‌ ಹೋಮಿಯೋಪಥಿ, ನೇತಾಜಿ ಸುಭಾಷ್ ಚಂದ್ರ ಬೋಸ್‌ ಯುನಿವರ್ಸಿಟಿ (ಮುಕ್ತ ವಿಶ್ವವಿದ್ಯಾಲಯ), ಭಾರತೀಯ ಶಿಕ್ಷಾ ಪರಿಷದ್‌ ಸಹ ನಕಲಿ ಎಂದು ಯುಜಿಸಿ ಘೋಷಿಸಿದೆ.

ಆಂಧ್ರಪ್ರದೇಶದಲ್ಲಿ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯುನಿವರ್ಸಿಟಿ, ಬೈಬಲ್ ಓಪನ್ ಯುನಿವರ್ಸಿಟಿ ಆಫ್ ಇಂಡಿಯಾ ನಕಲಿಯಾಗಿದ್ದರೆ; ಪಶ್ಚಿಮ ಬಂಗಾಳದಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ ಸಂಸ್ಥೆಗಳು ಈ ಪಟ್ಟಿಯಲ್ಲಿವೆ.

ಕರ್ನಾಟಕದಲ್ಲಿನ ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ, ಕೇರಳದ ಸೇಂಟ್ ಜಾನ್ಸ್ ಯುನಿವರ್ಸಿಟಿ, ಪುದುಚೇರಿಯ ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌, ಮಹಾರಾಷ್ಟ್ರದ ರಾಜಾ ಅರೇಬಿಕ್ ವಿಶ್ವವಿದ್ಯಾಲಯ ನಕಲಿ ಎಂದು ಘೋಷಿಷಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT