ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ | ₹800 ರೂಪಾಯಿಗೆ 8 ತಿಂಗಳ ಮಗಳನ್ನು ಮಾರಿದ ತಾಯಿ!

Published 5 ಜುಲೈ 2023, 7:54 IST
Last Updated 5 ಜುಲೈ 2023, 7:54 IST
ಅಕ್ಷರ ಗಾತ್ರ

ಮಯೂರಭಂಜ್‌: ಬಡತನದ ನಡುವೆ ಎರಡನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ಹತಾಶಳಾದ ತಾಯಿಯೊಬ್ಬಳು ತನ್ನ 8 ತಿಂಗಳ ಮಗುವನ್ನು ₹800 ರೂಪಾಯಿಗೆ ಮಾರಾಟ ಮಾಡಿದ ಮನಕಲಕುವ ಘಟನೆ ಒಡಿಶಾದ ಮಯೂರಭಂಜ್ ಜಿಲ್ಲೆಯ ಕುಂಟಾ ಎಂಬಲ್ಲಿ ನಡೆದಿದೆ.

ಮಗುವಿನ ತಾಯಿಯನ್ನು ಕರಾವಿ ಮುರ್ಮು ಎಂದು ಗುರುತಿಸಲಾಗಿದೆ. ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಈಕೆಯ ಕುಟುಂಬ ಬಡತನದಲ್ಲೇ ಜೀವನ ಸಾಗಿಸುತ್ತಿದೆ. ಈ ನಡುವೆ ಎರಡನೇ ಮಗು ಹೆಣ್ಣಾಗಿದ್ದರ ಬಗ್ಗೆ ಕರಾವಿ ಮುರ್ಮು ತೀವ್ರ ಹತಾಶರಾಗಿದ್ದರು. ಈ ಬಗ್ಗೆ ತನ್ನ ನೆರೆಹೊರೆಯರಲ್ಲಿ ಹಂಚಿಕೊಂಡು ಬೇಸರಪಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.

ಮಗುವಿನ ಮಾರಾಟದ ಬಗ್ಗೆ ತನ್ನ ಸ್ನೇಹಿತೆ ಮಹಿ ಮುರ್ಮುವೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಂತರ ದಂಪತಿಯೊಬ್ಬರಿಗೆ ₹800 ರೂಪಾಯಿಗೆ ಮಾರಾಟ ಮಾಡಿದ್ದರು.

ಕರಾಮಿ ಮುರ್ಮು ಅವರ ಪತಿ ತಮಿಳುನಾಡಿನಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದು, ತನ್ನ ಪತ್ನಿ ಮಗುವನ್ನು ಮಾರಾಟ ಮಾಡಿದ್ದಾಳೆ ಎಂಬ ಬಗ್ಗೆ ಮೊದಲು ಆತನಿಗೆ ತಿಳಿದಿರಲಿಲ್ಲ. ಮನೆಗೆ ಹಿಂತಿರುಗಿ ಬಂದು ಎರಡನೇ ಮಗುವಿನ ಬಗ್ಗೆ ವಿಚಾರಿದಾಗ, ಮಗು ಸತ್ತು ಹೋಗಿರುವುದಾಗಿ ಪತ್ನಿ ಹೇಳಿದ್ದಳು. ಮಗುವಿನ ಮಾರಾಟದ ಬಗ್ಗೆ ನೆರೆಹೊರೆಯವರಿಂದ ವಿಷಯ ತಿಳಿದ ಪತಿ, ತನ್ನ ಪತ್ನಿ ವಿರುದ್ಧವೇ ದೂರು ನೀಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ, ಖರೀದಿಸಿದ ದಂಪತಿ ಮತ್ತು ಮಧ್ಯವರ್ತಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಮಯೂರಭಂಜ್ ಪೊಲೀಸ್‌ ವರಿಷ್ಠಾಧಿಕಾರಿ ಬತ್ತುಲ ಗಂಗಾಧರ್, ‘ತಾಯಿ ತನ್ನ ಮಗುವಿನೊಂದಿಗೆ ಮಾರುಕಟ್ಟೆಗೆ ಹೋಗಿದ್ದಳು. ಹಿಂತಿರುಗಿ ಬರುವಾಗ ಆಕೆಯ ಕೈಯಲ್ಲಿ ಮಗುವಿರಲಿಲ್ಲ. ಮಗುವಿನ ಬಗ್ಗೆ ನೆರೆಹೊರೆಯವರು ಕೇಳಿದಾಗ, ಮಗು ಸತ್ತು ಹೋಯಿತು ಎಂದು ಹೇಳಿದ್ದಳು‘ ಎಂದರು.

‘ತಾಯಿ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣದಡಿ ದಾಖಲಿಸಿದ್ದೇವೆ. ಮಗುವನ್ನು ರಕ್ಷಿಸಿ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಿಲಾಗಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT