ಲಖನೌ: ‘ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ (ತಿದ್ದುಪಡಿ) ಮಸೂದೆ–2024’ ಅನ್ನು ಉತ್ತರ ಪ್ರದೇಶ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.

ವಂಚನೆ ಅಥವಾ ಬಲವಂತದಿಂದ ಮತಾಂತರ ಮಾಡುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ಈ ತಿದ್ದುಪಡಿ ಮಸೂದೆಯು ಅವಕಾಶ ನೀಡುತ್ತದೆ.

ಈ ಮೊದಲು, ಮಹಿಳೆಯನ್ನು ಮೋಸದಿಂದ ಮದುವೆಯಾಗಿ, ನಂತರ ಆಕೆಯನ್ನು ಮತಾಂತರಗೊಳಿಸಿದ್ದು ಸಾಬೀತಾದ ಸಂದರ್ಭದಲ್ಲಿ, ಅಪರಾಧಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹50 ಸಾವಿರ ದಂಡ ವಿಧಿಸಲು ಅವಕಾಶ ಇತ್ತು.

ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಖನ್ನಾ ಅವರು ಈ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಸೋಮವಾರ ಮಂಡಿಸಿದ್ದರು.

‘ಬೆದರಿಕೆ ಒಡ್ಡುವ/ಹಲ್ಲೆ ಮಾಡಿ ಇಲ್ಲವೇ ಪಿತೂರಿಯ ಮೂಲಕ ಒಬ್ಬ ವ್ಯಕ್ತಿ ಮಹಿಳೆಯನ್ನು ಮದುವೆಯಾದರೆ ಅಥವಾ ಮದುವೆಯಾಗುವುದಾಗಿ ಭರವಸೆ ನೀಡಿದಲ್ಲಿ; ಮತಾಂತರ ಮಾಡುವ ಉದ್ದೇಶದಿಂದ ಮಹಿಳೆ, ಬಾಲಕಿ ಅಥವಾ ಯಾವುದೇ ವ್ಯಕ್ತಿಯನ್ನು ಕಳ್ಳಸಾಗಾಣಿಕೆ ಮಾಡಿದಲ್ಲಿ ಆ ವ್ಯಕ್ತಿ ಎಸಗಿದ ಕೃತ್ಯವನ್ನು ಅತ್ಯಂತ ಗಂಭೀರ ಅಪರಾಧವೆಂದು ಪರಿಗಣಿಸಲಾಗುವುದು‘ ಎಂಬ ಅವಕಾಶವನ್ನು ಮಸೂದೆಯಲ್ಲಿ ಪ್ರಸ್ತಾವಿಸಲಾಗಿತ್ತು.

ಇಂತಹ ಅಪರಾಧ ಎಸಗಿದ ವ್ಯಕ್ತಿಗೆ 20 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವನ್ನು ಸಹ ಮಸೂದೆ ಒಳಗೊಂಡಿದೆ.

ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ 2020ರ ನವೆಂಬರ್ನಲ್ಲಿ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡ ನಂತರ, ಕಾಯ್ದೆ ಜಾರಿಗೆ ಬಂದಿತ್ತು.

ತಿದ್ದುಪಡಿಯ ಪ್ರಮುಖ ಅಂಶಗಳು

ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾವುದೇ ವ್ಯಕ್ತಿಯು ಎಫ್ಐಆರ್ ದಾಖಲಿಸಬಹುದು. ಈ ಮೊದಲು, ಪ್ರಕರಣ ಕುರಿತಂತೆ ಯಾವುದೇ ವ್ಯಕ್ತಿ ಮಾಹಿತಿ ಅಥವಾ ದೂರು ನೀಡಬಹುದಿತ್ತು. ಸಂತ್ರಸ್ತೆ, ಆಕೆಯ ಪಾಲಕರು ಅಥವಾ ಒಡಹುಟ್ಟಿದವರ ಉಪಸ್ಥಿತಿ ಅಗತ್ಯವಿತ್ತು

ಸೆಷನ್ಸ್ ಕೋರ್ಟ್ಗಿಂತ ಕೆಳ ಹಂತದ ನ್ಯಾಯಾಲಯಗಳು ಇಂತಹ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ

ಸರ್ಕಾರಿ ವಕೀಲರಿಗೆ ವಾದ ಮಂಡನೆ/ಅಭಿಪ್ರಾಯ ತಿಳಿಸಲು ಅವಕಾಶ ನೀಡದೇ ಜಾಮೀನು ಅರ್ಜಿಯನ್ನು ಪರಿಗಣಿಸುವಂತಿಲ್ಲ

ಈ ತಿದ್ದುಪಡಿ ಕಾಯ್ದೆಯಡಿ ದಾಖಲಾಗುವ ಎಲ್ಲ ಅಪರಾಧಗಳು ಜಾಮೀನು ರಹಿತ ಅಪರಾಧಗಳಾಗಿರುತ್ತವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.