ಮೀರತ್ (ಉತ್ತರ ಪ್ರದೇಶ): ಪ್ರಾದೇಶಿಕ ರ್ಯಾಪಿಡ್ ಸಾರಿಗೆ ವ್ಯವಸ್ಥೆ (ಆರ್ಆರ್ಟಿಎಸ್) ಕಾರಿಡಾರ್ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಸಲುವಾಗಿ ಮೀರತ್ನ ದೆಹಲಿ ರಸ್ತೆಯಲ್ಲಿರುವ ದಶಕಗಳಷ್ಟು ಹಳೆಯದಾದ ಮಸೀದಿಯನ್ನು ಕೆಡವಲಾಗಿದೆ.

ಅಧಿಕಾರಿಗಳು ಮತ್ತು ಮಸೀದಿಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಸ್ಥಳೀಯ ಮುಸ್ಲಿಂ ಸಮುದಾಯದ ಒಪ್ಪಿಗೆಯ ಮೇರೆಗೆ ಮಸೀದಿಯನ್ನು ಕೆಡವಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರ್ಯಾಪಿಡ್ ರೈಲು ಯೋಜನೆಯ ಪ್ರಗತಿಗೆ ಮಸೀದಿಯು ಅಡ್ಡಿಯಾಗುತ್ತಿದ್ದರಿಂದ ಅದನ್ನು ತೆಗೆದುಹಾಕುವ ನಿರ್ಧಾರ ಕೈಗೊಳ್ಳಲಾಯಿತು. ಗುರುವಾರ ಮುಸ್ಲಿಂ ಸಮುದಾಯದ ಸದಸ್ಯರು ಮಸೀದಿಯ ಕೆಲವು ಭಾಗಗಳನ್ನು ಕೆಡವುದರೊಂದಿಗೆ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಲಾಯಿತು. ಬಳಿಕ ಬುಲ್ಡೋಜರ್ ಬಳಸಿ ತಡರಾತ್ರಿ ಮಸೀದಿ ಕೆಡವುವಿಕೆಯನ್ನು ಪೂರ್ಣಗೊಳಿಸಲಾಗಿದ್ದು, ಅವಶೇಷಗಳನ್ನು ಸಹ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್, ‘ಮಸೀದಿಯ ಸ್ಥಳಾಂತರವನ್ನು ಪರಸ್ಪರ ಒಪ್ಪಂದದೊಂದಿಗೆ ನಡೆಸಲಾಗಿದೆ. ಮುಸ್ಲಿಂ ಸಮುದಾಯದ ಒಪ್ಪಿಗೆಯನ್ನು ಪಡೆದು ಮಸೀದಿಯನ್ನು ಧ್ವಂಸಗೊಳಿಸಲಾಗಿದೆ. ಮಸೀದಿಯನ್ನು ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ, ಸಮುದಾಯಕ್ಕೆ ಯಾವುದೇ ಪರ್ಯಾಯ ಭೂಮಿಯನ್ನು ಒದಗಿಸಲಾಗಿಲ್ಲ ಮತ್ತು ಅಂತಹ ಯಾವುದೇ ವಿನಂತಿಯನ್ನು ಅವರು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.