ಮಹಾರಾಜಗಂಜ್ (ಉತ್ತರ ಪ್ರದೇಶ): ಮುಂದಿನ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನೆ ಮಾಡುವ ಮೂಲಕ ಉತ್ತರ ಪ್ರದೇಶವು ಸಮೃದ್ಧ ರಾಜ್ಯವಾಗಿ ಹೊರಹೊಮ್ಮಲಿದೆ. ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ದೇಶದಲ್ಲಿ ಪ್ರಥಮ ಸ್ಥಾನದಲ್ಲಿರಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಮಹಾರಾಜಗಂಜ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಹಿಂದಿನ ಸರ್ಕಾರಗಳು ‘ಒಂದು ಜಿಲ್ಲೆ, ಒಂದು ಮಾಫಿಯಾ’ವನ್ನು ಪ್ರೋತ್ಸಾಹಿಸುತ್ತಿದ್ದವು. ಆದರೆ, ಬಿಜೆಪಿ ಸರ್ಕಾರ ಈಗ ಅದನ್ನು ‘ಒಂದು ಜಿಲ್ಲೆ, ಒಂದು ವೈದ್ಯಕೀಯ ಕಾಲೇಜು’ ಎಂದು ಬದಲಾಯಿಸಿದೆ’ ಎಂದು ತಿಳಿಸಿದ್ದಾರೆ.

‘ಮುಂದಿನ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನೆ ಮಾಡುವ ಮೂಲಕ ಉತ್ತರ ಪ್ರದೇಶವನ್ನು ಸಮೃದ್ಧ ರಾಜ್ಯವಾಗಿ ಸ್ಥಾಪಿಸಲಾಗುವುದು. ಶೂನ್ಯ ಬಡತನದ ಗುರಿಯನ್ನು ಸಾಧಿಸುವ ಮೂಲಕ ಉತ್ತರ ಪ್ರದೇಶವನ್ನು ದೇಶದಲ್ಲಿ ನಂಬರ್ ಒನ್ ಆರ್ಥಿಕತೆಯನ್ನಾಗಿ ಮಾಡುತ್ತೇವೆ’ ಎಂದು ಆದಿತ್ಯನಾಥ ಹೇಳಿದ್ದಾರೆ.

ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆದಿತ್ಯನಾಥ್ ಧನ್ಯವಾದ ತಿಳಿಸಿದರು. ವಕ್ಫ್ ಮಂಡಳಿಯ ಹೆಸರಿನಲ್ಲಿ ನಡೆಯುತ್ತಿರುವ ಲೂಟಿಗೆ ಇದು ಕಡಿವಾಣ ಹಾಕುತ್ತದೆ ಎಂದು ಅವರು ತಿಳಿಸಿದ್ದಾರೆ.
.ಒಡಕು ಮೂಡಿಸುವ BJPಯ ತಂತ್ರ ಅರಿಯಿರಿ: ಮುನಂಬಮ್ ಗ್ರಾಮಸ್ಥರಿಗೆ ಕೇರಳ ಸಚಿವರ ಮನವಿ.ವಕ್ಫ್ ವಸೂದೆ: ಭವಿಷ್ಯದಲ್ಲಿ ಇತರೆ ಸಮುದಾಯಗಳ ಮೇಲಿನ ದಾಳಿಗೆ ಮುನ್ಸೂಚನೆ; ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.