ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿಧಾನಸಭೆ: ಇ.ಡಿ ವರದಿ ಪ್ರಸ್ತಾಪ– ಗದ್ದಲ

Last Updated 1 ಮಾರ್ಚ್ 2023, 5:52 IST
ಅಕ್ಷರ ಗಾತ್ರ

ತಿರುವನಂತಪುರ: ‘ಲೈಫ್ ಮಿಷನ್‌’ ಪ್ರಕರಣ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ವರದಿಯನ್ನು ವಿರೋಧ ಪಕ್ಷಗಳ ಮೈತ್ರಿಕೂಟ ಯುಡಿಎಫ್‌ ಪ್ರಸ್ತಾಪಿಸಿದ್ದು ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಗದ್ದಲಕ್ಕೆ ಕಾರಣವಾಯಿತು.

ನಿಲುವಳಿ ಸೂಚನೆ ಮೇಲಿನ ಚರ್ಚೆ ವೇಳೆ, ಕಾಂಗ್ರೆಸ್‌ ಶಾಸಕ ಮ್ಯಾಥ್ಯೂ ಕುಳಲ್‌ನಾಥನ್ ಅವರು ಈ ವರದಿಯಲ್ಲಿ ಅಂಶಗಳನ್ನು ಓದುತ್ತಿದ್ದಂತೆಯೇ, ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲ ಜೋರಾಗುತ್ತಿದಂತೆಯೇ, ಸ್ಪೀಕರ್‌ ಎ.ಎನ್‌.ಶಂಶೀರ್‌ ಅವರು ಕೆಲ ಹೊತ್ತು ಕಲಾಪವನ್ನು ಮುಂದೂಡಿದರು.

ಪ್ರಕರಣ ಕುರಿತು ಇ.ಡಿ ಸಲ್ಲಿಸಿರುವ ಈ ವರದಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ವಿರುದ್ಧ ಕೆಲ ಆರೋಪಗಳನ್ನು ಹೊರಿಸಲಾಗಿದೆ.

ಪಿಣರಾಯಿ ವಿಜಯನ್‌ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ.ಶಿವಶಂಕರ್‌ ಅವರು ಇದೇ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ತನಿಖೆ ಎದುರಿಸುತ್ತಿದ್ದಾರೆ.

‘ಲೈಫ್‌ ಮಿಷನ್‌’ ಯೋಜನೆಯಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT