ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ಈವರೆಗೆ ಭಾರತದ 82 ಸಾವಿರ ವಿದ್ಯಾರ್ಥಿಗಳಿಗೆ ವೀಸಾ: ಅಮೆರಿಕ 

Last Updated 8 ಸೆಪ್ಟೆಂಬರ್ 2022, 14:39 IST
ಅಕ್ಷರ ಗಾತ್ರ

ಚೆನ್ನೈ:2022ನೇ ಸಾಲಿನಲ್ಲಿ ಇದುವರೆಗೂ ಭಾರತದ ಒಟ್ಟು 82,000 ವಿದ್ಯಾರ್ಥಿಗಳಿಗೆ ಅಮೆರಿಕಕ್ಕೆ ತೆರಳಲು ವೀಸಾ ಸಿಕ್ಕಿದ್ದು, ಇದು ದಾಖಲೆಯಾಗಿದೆ. ರಾಯಭಾರ ಕಚೇರಿ, ನಾಲ್ಕು ನಗರಗಳಲ್ಲಿರುವ ಕಾನ್ಸುಲೇಟ್‌ ಕಚೇರಿಗಳ ಮೂಲಕ ವೀಸಾಗಳನ್ನು ನೀಡಲಾಗಿದೆ.

ಇಲ್ಲಿನ ಕಾನ್ಸುಲೇಟ್‌ ಕಚೇರಿ ಈ ಬಗ್ಗೆ ಹೇಳಿಕೆ ನೀಡಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ವೀಸಾ ನೀಡಲು ಕ್ರಮವಹಿಸಲಾಗಿದೆ ಎಂದಿದೆ. ಉನ್ನತ ಶಿಕ್ಷಣ ಬಯಸಿ ವಿದೇಶಗಳಿಗೆ ತೆರಳುವ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಮೊದಲ ಆಯ್ಕೆಯಾಗಿದೆ.

‘ಈವರೆಗೆ 82 ಸಾವಿರ ವೀಸಾ ನೀಡಲಾಗಿದೆ. ಹಿಂದಿನ ವರ್ಷಗಳ ಅಂಕಿ ಅಂಶಗಳಿಗೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ’ ಎಂದು ಕಾನ್ಸುಲೇಟ್‌ ಕಚೇರಿಯ ವೀಸಾ ಉಸ್ತುವಾರಿ ಅಧಿಕಾರಿ ಪ್ಯಾಟ್ರಿಕಾ ಲ್ಯಾಸಿನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT