ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದರಿನಾಥ ಧಾಮಕ್ಕೆ ಸಿಎಂ ಯೋಗಿ ಭೇಟಿ..ವಿಶೇಷ ಪೂಜೆ ಸಲ್ಲಿಕೆ

Published 8 ಅಕ್ಟೋಬರ್ 2023, 7:36 IST
Last Updated 8 ಅಕ್ಟೋಬರ್ 2023, 7:36 IST
ಅಕ್ಷರ ಗಾತ್ರ

ಕೇದಾರನಾಥ (ಉತ್ತರಾಖಂಡ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಬದರಿನಾಥ ಧಾಮದಲ್ಲಿರುವ ಸುಂದರ್ ನಾಥ್ ಗುಹೆಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ಪ್ರಾದೇಶಿಕ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯೋಗಿ ಉತ್ತರಾಖಂಡಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

'ಅಪಾರವಾದ ನಂಬಿಕೆ ಮತ್ತು ಉತ್ಸಾಹದಿಂದ ದೇಶ ಮತ್ತು ಪ್ರಪಂಚದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಇದು ನಮಗೆ ಸ್ಫೂರ್ತಿಯಾಗಿದೆ' ಎಂದರು.

ಶನಿವಾರ ಸಂಜೆ ಸಿಎಂ ಯೋಗಿ ಬದರಿನಾಥ ಧಾಮದ ಶಯನ ಆರತಿಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ‌ಉತ್ತರಾಖಂಡದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. 13,200 ಅಡಿ ಎತ್ತರದಲ್ಲಿರುವ ಚೀನಾ ಗಡಿ ಬಳಿಯ ಘಸ್ತೌಲಿ ಪೋಸ್ಟ್‌ಗೆ ತೆರಳಿದರು. ಅಲ್ಲಿ ನಿಯೋಜಿತ ಐಟಿಬಿಪಿ ಸಿಬ್ಬಂದಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದರು.

ಶನಿವಾರ(ನಿನ್ನೆ) ತೆಹ್ರಿಯ ನರೇಂದ್ರ ನಗರದಲ್ಲಿ ನಡೆದ ಕೇಂದ್ರ ವಲಯ ಮಂಡಳಿಯ 24ನೇ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ಇಂದು (ಭಾನುವಾರ) ಸಿಎಂ ಯೋಗಿ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಪವಿತ್ರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT