ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೂಕು ತೋರಿಸಿ ₹15 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ!

ಉತ್ತರಾಖಂಡದ ರಾಜಧಾನಿ ಡೆಹರಾಡೂನ್‌ನಲ್ಲಿ ಹಾಡಹಗಲೇ ಘಟನೆ
Published 10 ನವೆಂಬರ್ 2023, 10:37 IST
Last Updated 10 ನವೆಂಬರ್ 2023, 10:37 IST
ಅಕ್ಷರ ಗಾತ್ರ

ಡೆಹರಾಡೂನ್: ಉತ್ತರಾಖಂಡದ ರಾಜಧಾನಿ ಡೆಹರಾಡೂನ್‌ನಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ.

ಶಸ್ತ್ರಸಜ್ಜಿತ ಮೂವರು ಡೆಹರಾಡೂನ್‌ನ ರಾಜಾಪುರ ರಸ್ತೆಯಲ್ಲಿರುವ ಖಾಸಗಿ ಕಂಪನಿಯೊಂದರ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಸುಮಾರು ₹15 ಕೋಟಿ ಮೌಲ್ಯದ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರು ಈ ಘಟನೆ ನಡೆದಿದ್ದು, ನವೆಂಬರ್ 9 ರಂದು ಉತ್ತರಾಖಂಡಕ್ಕೆ ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಂದೋಬಸ್ತ್ ಇತ್ತು. ಅದರೂ ಈ ಘಟನೆ ನಡೆದಿದ್ದು ಅಚ್ಚರಿ ಮೂಡಿಸಿದೆ.

ಮೂವರು ದರೋಡೆಕೋರರಲ್ಲಿ ಒಬ್ಬ ಹೊರಗೆ ನಿಂತಿದ್ದರೆ ಉಳಿದ ಒಬ್ಬ ಒಳಗೆ ನುಗ್ಗಿ ಬಂದೂಕು ತೋರಿಸಿ ದರೋಡೆಮಾಡಿಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ದರೋಡೆ ಮಾಡಿದವರ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿ ಬಂಧಿಸಲಿದ್ದೇವೆ ಎಂದು ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಪುಸ್ಕರ್ ಸಿಂಗ್ ಧಾಮಿ ಕೂಡ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಕೂಡಲೇ ದರೋಡೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT