ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗದ ಅಲಕಾನಂದ ನದಿಗೆ ಬಸ್ ಉರುಳಿದ್ದ ಪರಿಣಾಮ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಬಸ್ ನದಿಗೆ ಬಿದ್ದ ಸ್ಥಳದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಹರಿದ್ವಾರ ಜಿಲ್ಲೆಯಲ್ಲಿ ರಾಜಸ್ಥಾನ ಮೂಲದ ಪ್ರತಾಪ್ ಚೌಕ್ ನಿವಾಸಿ ಲಲಿತ್ ಕುಮಾರ್ ಸೋನಿ (48) ಎಂಬುವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ರಾಜಸ್ಥಾನ, ಗುಜರಾತ್. ಮಧ್ಯಪ್ರದೇಶ, ಮಹಾರಾಷ್ಟ್ರದ ಒಟ್ಟು 31 ಮಂದಿ ಭಕ್ತರು ಬದರಿನಾಥಕ್ಕೆ ಹೊರಟಿದ್ದರು. ಈ ವೇಳೆ ರುದ್ರಪ್ರಯಾಗದ ದೋಲ್ತೀರ್ ಪ್ರದೇಶದಲ್ಲಿ ಗುರುವಾರ ಅಪಘಾತ ಸಂಭವಿಸಿತ್ತು.

ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ. ಆ ಪೈಕಿ ನಾಲ್ವರು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದ ನಾಲ್ವರು ಋಷಿಕೇಶದ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸೇರಿದಂತೆ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಆರು ಮೃತದೇಹಗಳನ್ನು ಹೊರಕ್ಕೆ ತರಲಾಗಿದೆ.

ಇನ್ನೂ ಆರು ಯಾತ್ರಿಕರು ಕಾಣೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.